ಮದ್ದೂರಿನಲ್ಲಿ ಪಯಣ ಶುರು ಮಾಡಿದ “ರಾ ರಾ ಆರೆಕ್ಸ್”**ಬೈಕ್ ಬೆನ್ನುಬಿದ್ದ ಯತಿರಾಜ್ !
ನಟ, ಪತ್ರಕರ್ತ, ಹೋರಾಟಗಾರ – ಹೀಗೆ ನಾನಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ ಯತಿರಾಜ್ ಇತ್ತೀಚಿನ ವರ್ಷಗಳಲ್ಲಿ ನಿರ್ದೇಶಕರಾಗಿಯೂ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಈ ಸಲ ಯತಿರಾಜ್ ನಿರ್ದೇಶನದಲ್ಲಿ ಹೊಸ ಸಾಧ್ಯತೆಯೊಂದನ್ನು ಹುಡುಕ ಹೊರಟಿದ್ದಾರೆ. ಯತಿರಾಜ್ ನಿರ್ದೇಶಿಸಲಿರುವ “ರಾ..ರಾ.. ಆರೆಕ್ಸ್” ಎನ್ನುವ ಹೊಸ ಚಿತ್ರವೊಂದು ಸೆಟ್ಟೇರಿದೆ. ಈ ಸಲ ತೀರಾ ಭಿನ್ನವಾದ ಕಥಾವಸ್ತುವೊಂದನ್ನು ಯತಿ ಕೈಗೆತ್ತಿಕೊಂಡಿದ್ದಾರೆ. ಸಿನಿಮಾದ ಶೀರ್ಷಿಕೆ ನೋಡಿದರೇನೆ ಅದು ಖಾತ್ರಿಯಾಗುತ್ತಿದೆ. ಏನಿದು ʻರಾರಾ ಆರೆಕ್ಸ್?ʼ ಅಂತಾ ಎಲ್ಲರೂ ಪ್ರಶ್ನಿಸುವಂತಿದೆ. ಆರೆಕ್ಸ್ ಬೈಕ್ ಈ ಸಿನಿಮಾದ ಕೇಂದ್ರಬಿಂದು ಅನ್ನೋದನ್ನು…
