ದೂರದೂರಿನಲ್ಲೂ ಮೇಳೈಸುತ್ತಿದೆ “ದೂರ ತೀರ ಯಾನ”ದ ಶೀರ್ಷಿಕೆ ಗೀತೆ* .
ಡಿ ಕ್ರಿಯೇಷನ್ಸ್ ನಿರ್ಮಾಣದ, ಮಂಸೋರೆ ನಿರ್ದೇಶನದ ಈ ಚಿತ್ರ ಜುಲೈ 11 ಕ್ಕೆ ತೆರೆಗೆ .ಕ್ರಿಯೇಷನ್ಸ್ ಮೂಲಕ ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ದೇವರಾಜ್ ಆರ್. ನಿರ್ಮಾಣದ ಹಾಗೂ “ಹರಿವು”, ” ನಾತಿಚರಾಮಿ”, “ಆಕ್ಟ್ 1978”, “19.20.21” ನಂತಹ ಜನಮೆಚ್ಚುಗೆ ಪಡೆದ ಚಿತ್ರಗಳ ನಿರ್ದೇಶಕ ಮಂಸೋರೆ ನಿರ್ದೇಶಿಸಿರುವ ಹಾಗೂ ವಿಜಯ್ ಕೃಷ್ಣ – ಪ್ರಿಯಾಂಕ ಕುಮಾರ್ ನಾಯಕ – ನಾಯಕಿಯಾಗಿ ನಟಿಸಿರುವ “ದೂರ ತೀರ ಯಾನ” ಚಿತ್ರದ ಶೀರ್ಷಿಕೆ ಗೀತೆ ಇತ್ತೀಚೆಗೆ ಬಿಡುಗಡೆಯಾಯಿತು….
