ಆದಿತ್ಯ – ಓಂಪ್ರಕಾಶ್ ರಾವ್ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ “ಜಿಲ್ಲಾಧಿಕಾರಿ” ಚಿತ್ರಕ್ಕೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಚಾಲನೆ. .
ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ನೂತನ ಚಿತ್ರದ ಘೋಷಣೆ “AK 47”, “ಲಾಕಪ್ ಡೆತ್”, ” ಕಲಾಸಿಪಾಳ್ಯ”, “ಹುಚ್ಚ” ಸೇರಿದಂತೆ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್ ನಿರ್ದೇಶನದ ನೂತನ ಚಿತ್ರ “ಜಿಲ್ಲಾಧಿಕಾರಿ”. ” ಡೆಡ್ಲಿ ಸೋಮ” ಸೇರಿದಂತೆ ಅನೇಕ ಚಿತ್ರಗಳ ಮೂಲಕ ಜನರ ಮನ ಗೆದ್ದಿರುವ ಆದಿತ್ಯ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಈ ನೂತನ ಚಿತ್ರದ ಘೋಷಣೆಯಾಗಿದೆ. ಈ ನೂತನ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ಮೊದಲವಾರ ಆರಂಭವಾಗಲಿದೆ….
