ಕನ್ನಡದ ಹೆದ್ದಾರಿ ಥ್ರಿಲ್ಲರ್ “NH 66” ಚಿತ್ರಕ್ಕೆ ಮಾತಿನ ಜೋಡಣೆ(ಡಬ್ಬಿಂಗ್) ಮುಕ್ತಾಯ. .

ಕುತೂಹಲ ಮೂಡಿಸಿದೆ ಮಂಜುನಾಥ್ ಟಿ.ಆರ್ ನಿರ್ಮಾಣ – ನಿರ್ದೇಶನದ ಹಾಗೂ ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್, ರಾಜೇಶ್ ನಟರಂಗ ಅಭಿನಯದ ಈ ಚಿತ್ರ ರಾಯ ಫಿಲಂಸ್ ಲಾಂಛನದಲ್ಲಿ ಮಂಜುನಾಥ್ ಟಿ.ಆರ್ ನಿರ್ಮಿಸಿ, ನಿರ್ದೇಶಿಸಿರುವ ಹಾಗೂ ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್, ರಾಜೇಶ್ ನಟರಂಗ ಪ್ರಮುಖಪಾತ್ರದಲ್ಲಿ ನಟಿಸಿರುವ ಹೆದ್ದಾರಿ ಥ್ರಿಲ್ಲರ್ “NH 66” ಚಿತ್ರದ ಮಾತಿನ ಜೋಡಣೆ(ಡಬ್ಬಿಂಗ್) ಮುಕ್ತಯವಾಗಿದೆ. ABM ಸ್ಟುಡಿಯೋದಲ್ಲಿ ಡಬ್ಬಿಂಗ್ ಪ್ರಕ್ರಿಯೆ ನಡೆದಿದೆ.
“NH 66” ಚಿತ್ರದ ಹೆಸರೆ ಹೇಳುವಂತೆ ಒಂದು ಸಂಚಾರದ ಕಥೆ. ಐಕಾನಿಕ್ ಕರಾವಳಿ ಹೆದ್ದಾರಿಯ ಹಿನ್ನೆಲೆಯಲ್ಲಿ, “NH66” ಒಂದು ರೋಮಾಂಚಕಾರಿ ಹೆದ್ದಾರಿ ಥ್ರಿಲ್ಲರ್ ಆಗಿದ್ದು, ಇದು ಅದೃಷ್ಟ, ಆಯ್ಕೆಗಳು ಮತ್ತು ಒಂದೇ ಪ್ರಯಾಣದ ಪರಿಣಾಮಗಳನ್ನು ಅನ್ವೇಷಿಸುತ್ತದೆ. ಪ್ರಸ್ತುತ ಡಬ್ಬಿಂಗ್ ಪೂರ್ಣಗೊಂಡಿದ್ದು, ಚಿತ್ರವು ಅದರ ಯೋಜಿತ ಥಿಯೇಟ್ರಿಕಲ್ ಬಿಡುಗಡೆಗೆ ಮುಂಚಿತವಾಗಿ ಹಿನ್ನೆಲೆ ಸಂಗೀತ, ಧ್ವನಿ ವಿನ್ಯಾಸ, DI ಮತ್ತು ಅಂತಿಮ ಮಾಸ್ಟರಿಂಗ್ ಸೇರಿದಂತೆ ಪೋಸ್ಟ್-ಪ್ರೊಡಕ್ಷನ್‌ನ ಅಂತಿಮ ಹಂತಗಳನ್ನು ಪ್ರವೇಶಿಸುತ್ತದೆ. ಇದು ಮಂಗಳೂರಿನಿಂದ ಮುಂಬೈಗೆ ಹೋಗುವ ಮಧ್ಯೆ ನಡೆಯುವ ಎರಡು ದಿನಗಳ ಕಥೆಯೂ ಹೌದು. ಈ ಚಿತ್ರಕ್ಕೆ ನಾನೇ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಎಲ್ಲಾ ಅಂದುಕೊಂಡ ಹಾಗೆ ಆದರೆ ರಾಯರ ದಯೆಯಿಂದ ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುತ್ತೇನೆ ಎಂದು ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಮಂಜುನಾಥ್ ಟಿ.ಆರ್ ತಿಳಿಸಿದ್ದಾರೆ.

ಸುನೀತ್ ಹಲಗೇರಿ ಅವರ ಛಾಯಾಗ್ರಹಣ, ತ್ರಿಲೋಕ್ ತ್ರಿವಿಕ್ರಮ ಅವರ ಸಾಹಿತ್ಯ, ಸಂಭಾಷಣೆ ಹಾಗೂ ಉಜ್ವಲ್ ಚಂದ್ರ ಅವರ ಸಂಕಲನವಿರುವ “NH 66” ಚಿತ್ರಕ್ಕೆ ಸ್ವಾಮಿನಾಥನ್ ಅವರ ಸಂಗೀತ ನಿರ್ದೇಶನವಿದೆ.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted