ಸಂಗೀತ ಪ್ರಪಂಚದಲ್ಲಿ ವಿಜಯ್‍ ಪ್ರಕಾಶ್‍ ಹೊಸ ಹೆಜ್ಜೆ

ವಿಜಯ್‍ ಪ್ರಕಾಶ್‍ ಕಲ್ಚರಲ್‍ ಕ್ಲಬ್, ದ್ವಾರ್ ಸ್ಟುಡಿಯೋಸ್‍ ಮತ್ತು ದ್ವಾರ್ ಮ್ಯೂಸಿಕ್‍ ಪ್ರಾರಂಭ

ಸಿನಿಮಾ, ಶಾಸ್ತ್ರೀಯ ಸಂಗೀತ ಸೇರಿದಂತೆ ಹಲವು ಪ್ರಕಾರಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ಹಾಗೂ ಹೆಮ್ಮೆಯ ಕನ್ನಡಿಗ ವಿಜಯ್‍ ಪ್ರಕಾಶ್‍ ಹೊಸ ಹೆಜ್ಜೆ ಇಟ್ಟಿದ್ದಾರೆ. ಇಷ್ಟು ವರ್ಷಗಳ ತಮ್ಮ ಅನುಭವ, ಶ್ರಮ ಮತ್ತು ಹಣವನ್ನು ಧಾರೆ ಎರೆದು ವಿಜಯ್‍ ಪ್ರಕಾಶ್‍ ಕಲ್ಚರಲ್‍ ಕ್ಲಬ್, ದ್ವಾರ್ ಸ್ಟುಡಿಯೋಸ್‍ ಮತ್ತು ದ್ವಾರ್ ಮ್ಯೂಸಿಕ್‍ ಎಂಬ ಹೊಸ ಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ. ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವಂತೆ, ಸಂಗೀತದಲ್ಲಿ ಪಡೆದಿದನ್ನು ಸಂಗೀತಕ್ಕೇ ಕೊಡುತ್ತಿದ್ದಾರೆ.

ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಸಪ್ತಗಿರಿ ಲೇಔಟ್‍ನಲ್ಲಿ ವಿಜಯ್‍ ಪ್ರಕಾಶ್‍ ಕಲ್ಚರಲ್‍ ಕ್ಲಬ್ (VPCC) ಮತ್ತು ದ್ವಾರ್ ಸ್ಟುಡಿಯೋಸ್‍ ನಿರ್ಮಾಣವಾಗಿದ್ದು, ತಮ್ಮ ಮೂರು ಹೊಸ ಸಾಹಸಗಳ ಕುರಿತು ವಿವರಣೆ ನೀಡಲು ವಿಜಯ್‍ ಪ್ರಕಾಶ್‍ ಮತ್ತು ಅವರ ಪತ್ನಿ ಮಹತಿ ವಿಜಯ್‍ ಪ್ರಕಾಶ್‍ ಮಾಧ್ಯಮದವರನ್ನು ಆಹ್ವಾನಿಸಿದ್ದರು.

ಈ ಕುರಿತು ಮಾತನಾಡಿದ ವಿಜಯ್‍ ಪ್ರಕಾಶ್‍, ‘ಇಡೀ ಭಾರತದಲ್ಲೇ ಒಂದು ಬೃಹತ್‍ ಸಂಗೀತ ಶಾಲೆಯೊಂದನ್ನು ಪ್ರಾರಂಭಿಸಬೇಕು ಎಂಬ ಆಸೆ ಇತ್ತು. ಅದು ಯಾವತ್ತು ಈಡೇರುತ್ತದೋ ಗೊತ್ತಿಲ್ಲ. ಈ ನಿಟ್ಟಿನಲ್ಲಿ ಒಂದು ಸಣ್ಣ ಹೆಜ್ಜೆ ಈ VPCC. ಕಲೆ ಇಷ್ಟೆಲ್ಲಾ ಕೊಟ್ಟಿರುವಾಗ, ಅದನ್ನು ಒಳ್ಳೆಯ ರೀತಿಯಲ್ಲಿ ಬಳಿಸಿಕೊಳ್ಳಬೇಕು, ಕಲೆಗಾಗಿ ಏನು ಮಾಡಬೇಕು ಎಂದು ಯೋಚಿಸಿದಾಗ ಹುಟ್ಟಿದ್ದೇ VPCC. ಆಸಕ್ತರಿಗೆ ಸಂಗೀತ ಪಾಠ ಹೇಳಿಕೊಡುವುದರ ಜೊತೆಗೆ, ಹಾಡುಗಳನ್ನು ನಿರ್ಮಾಣ ಮಾಡುವುದಕ್ಕೆ ಒಂದು ಸ್ಟುಡಿಯೋ ಮತ್ತು ಅದನ್ನು ಹೊರತರವ ನಿಟ್ಟಿನಲ್ಲಿ ದ್ವಾರ್ ಮ್ಯೂಸಿಕ್‍ ಎಂಬ ಯೂಟ್ಯೂಬ್‍ ಚಾನಲ್‍ ಪ್ರಾರಂಭಿಸಿದ್ದೇವೆ. ಸುಮಾರು ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಈ ಕನಸು, ಈಗ ನನಸಾಗಿದೆ’ ಎಂದರು.

ಕಲಾವಿದರು, ಕಲಾಪೋಷಕರು ಮತ್ತು ಕಲಾರಸಿಕರು ಒಂದೇ ಜಾಗದಲ್ಲಿ ಸೇರಬೇಕು ಎಂಬ ಉದ್ದೇಶದಿಂದ VPCC ಪ್ರಾರಂಭಿಸಲಾಯಿತು ಎಂದು ಮಾಹಿತಿ ನೀಡಿದ ಮಹತಿ ವಿಜಯ್‍ ಪ್ರಕಾಶ್‍, ‘ಚಿಕ್ಕ ವಯಸ್ಸಿನಲ್ಲಿ ಹಾಡು, ನೃತ್ಯದ ಬಗ್ಗೆ ಅತಿವ ಆಸಕ್ತಿ ಇರುತ್ತದೆ. ಜವಾಬ್ದಾರಿಗಳು, ಒತ್ತಡಗಳಿಂದ ಅದನ್ನು ಮುಂದುವರೆಸುವುದಕ್ಕೆ ಆಗುವುದಿಲ್ಲ. ಅದರಿಂದ ಹವ್ಯಾಸಗಳನ್ನು ಬಿಟ್ಟುಬಿಡುತ್ತೇವೆ. ಹಾಗೆ ತಮ್ಮ ಹವ್ಯಾಸ ಮುಂದುವರೆಸುವ ಆಸಕ್ತಿ ಉಳ್ಳುವರು ಕಲಾಪ್ರಪಂಚಕ್ಕೆ ಪುನಃ ಬರಲಿ, ಹೊಸದಾಗಿ ಕಲಿತು ಬೆಳೆಯಲಿ ಎಂಬ ಕಾರಣಕ್ಕೆ ಈ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. ಇಲ್ಲಿ ವೈದ್ಯರು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಯ ಉದ್ಯೋಗಿಗಳು, ಗೃಹಿಣಿಯರು, ಮಕ್ಕಳು, ಹಿರಿಯ ನಾಗರಿಕರಿದ್ದಾರೆ. ನಾಲ್ಕು ವರ್ಷದವರಿಂದ 82 ವರ್ಷದ ವಯೋಮಾನದವರಿದ್ದಾರೆ. ಅವರಿಗೆ ರಂಗಗೀತೆಗಳು, ಜಾನಪದ, ಭಾವಗೀತೆ, ಭಕ್ತಿಗೀತೆ, ಸಿನಿಮಾ ಗೀತೆ ಸೇರಿದಂತೆ ಹಲವು ಪ್ರಕಾರದ ಸಂಗೀತವನ್ನು ಹೇಳಿಕೊಡಲಾಗುತ್ತದೆ’ ಎಂದರು.

ದ್ವಾರ್ ಸ್ಟುಡಿಯೋಸ್‍ನಲ್ಲಿ (Dvaar Studios) ಆಸಕ್ತರಿಗೆ ತಮ್ಮ ಸಂಗೀತವನ್ನು ನಿರ್ಮಾಣ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಯಾರಿಗೆ ತಮ್ಮ ಹಾಡು ರೆಕಾರ್ಡ್ ಮಾಡುವುದಕ್ಕೆ ಆಸಕ್ತಿ ಇದೆಯೋ, ಅವರು ತಮ್ಮ ಹಾಡನ್ನು ಇಲ್ಲಿ ರೆಕಾರ್ಡ್ ಮಾಡಬಹುದು. ಅವರಿಗೆ ಸಹಾಯ ಮಾಡುವುದಕ್ಕೆ ಸಂಗೀತ ನಿರ್ದೇಶಕರು ಸೇರಿದಂತೆ ಹಲವು ತಂತ್ರಜ್ಞರು ಇಲ್ಲಿದ್ದಾರೆ. ಹಾಡುವುದಕ್ಕೆ ಇಷ್ಟವಿರುವವರು ಬಂದು ಇಲ್ಲಿ ಹಾಡಬಹುದು.

ಇನ್ನು, ಮೂರನೆಯದಾಗಿ ಯೂಟ್ಯೂಬ್‍ನಲ್ಲಿ ದ್ವಾರ್ ಮ್ಯೂಸಿಕ್‍ (Dvaar Music) ಎಂಬ ಚಾನಲ್‍ ಪ್ರಾರಂಭಿಸಲಾಗಿದೆ. ಈಗಾಗಲೇ ಈ ಚಾನಲ್‍ನಲ್ಲಿ ‘ಬೆರೆತು’, ‘ಬಾನ ಸರದಾರ’, ‘ಅಹಂ ಸತ್‍’ ಮುಂತಾದ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ‘ನವರಾತ್ರಿ ಗೀತಮಾಲಾ’ ಎಂಬ ಹೆಸರಿನಡಿ ದುರ್ಗೆಯ ಒಂಬತ್ತು ರೂಪಗಳನ್ನು ಹಾಡುಗಳ ಮೂಲಕ ಕಟ್ಟಿಕೊಡಲಾಗಿದೆ. ಈ ಹಾಡುಗಳನ್ನು ವಿಜಯಪ್ರಕಾಶ್‍ ಅಲ್ಲದೆ, ಶಂಕರ್ ಮಹಾದೇವನ್‍, ಅನುರಾಧಾ ಭಟ್‍, ರಾಜೇಶ್‍ ಕೃಷ್ಣನ್, ಲಕ್ಷ್ಮೀ ನಾಗರಾಜ್, ಕೀರ್ತನ್‍ ಹೊಳ್ಳ, ಪ್ರಿಯಾಂಕಾ ಭಾರ್ವೆ, ಅನಿರುದ್ಧ್ ಐತಾಳ್‍ ಮತ್ತು ಶಿವಶ್ರೀ ಸ್ಕಂದಪ್ರಸಾದ್‍ ಹಾಡಿದ್ದಾರೆ. ಇದಲ್ಲದೆ, ತನುಷಾ ಕೆ.ಎಂ ಹಾಡಿರುವ ಮತ್ತು ಕೀರ್ತನ್‍ ಹೊಳ್ಳ ಸಂಗೀತ ಸಂಯೋಜಿಸಿರುವ ‘ಮೋಹ’ ಎಂಬ ಹೊಸ ಹಾಡನ್ನು ಬಿಡುಗಡೆ ಮಾಡಲಾಯಿತು. ಈ ಹಾಡಿಗೆ ರಾಘವೇಂದ್ರ ಕಾಮತ್‍ ಸಾಹಿತ್ಯ ರಚಿಸಿದ್ದಾರೆ. ಈ ಹಾಡನ್ನು ಅಂದು ಬಿಡುಗಡೆ ಮಾಡಲಾಯಿತು.

Similar Posts

  • ಅದ್ದೂರಿಯಾಗಿ ನೆರವೇರಿತು “ಅಪ್ಪು ಕಪ್ ಸೀಸನ್ 4″ರ ಜರ್ಸಿ ಅನಾವರಣ* .

    ಚೇತನ್ ಸೂರ್ಯ ಅವರ STELLER STUDIO & EVENT MANAGEMENT ಸಂಸ್ಥೆ, PRK studio ಸಂಸ್ಥೆಯ ಸಹಯೋಗದೊಂದಿಗೆ “ಅಪ್ಪು ಕಪ್”(ಶಟಲ್ ಬ್ಯಾಡ್ಮಿಂಟನ್ ಟೂರ್ನಿ) ನಾಲ್ಕನೇ ಸೀಸನ್ ಪಂದ್ಯಗಳು ಇದೇ ಜುಲೈ 24, 25, 26 ರಂದು ನಡೆಯಲಿದೆ. “ಅಪ್ಪು ಕಪ್ ಸೀಸನ್ 4” ಜರ್ಸಿ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ವಿಧಾನ ಪರಿಷತ್ ಸದಸ್ಯರು ಹಾಗೂ ಸಾಯಿಗೋಲ್ಡ್ ಪ್ಯಾಲೆಸ್ ಮಾಲೀಕರಾದ ಟಿ.ಎ ಶರವಣ ಹಾಗೂ ಕನ್ನಡಪರ ಹೋರಾಟಗಾರರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ…

  • ‘ತಾಯವ್ವ’ ನಟಿ ಗೀತಪ್ರಿಯ ಈಗ ‘ಅಪರಿಚಿತೆ’

    ಶೀರ್ಷಿಕೆ ಪೋಸ್ಟರ್ ಬಿಡುಗಡೆ ಮಾಡಿ ತಂಡಕ್ಕೆ ಸಾಥ್ ನೀಡಿದ ಶಾಸಕ ಸಿ.ಎನ್. ಅಶ್ವಥ್ ನಾರಾಯಣ ಈ ಮೊದಲು ‘ತಾಯವ್ವ’ ಎಂಬ ಸಿನಿಮಾದಲ್ಲಿ ನಟಿಸಿದ್ದ, ಗೀತಪ್ರಿಯ ಸುರೇಶ್ ಕುಮಾರ್ ಇದೀಗ ಮತ್ತೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆ ಚಿತ್ರದ ಹೆಸರು ‘ಅಪರಿಚಿತೆ’. ಹೌದು ಇತ್ತೀಚಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ, ಶಾಸಕ ಸಿ.ಎನ್. ಅಶ್ವಥ್ ನಾರಾಯಣ ‘ಅಪರಿಚಿತ’ ಶೀರ್ಷಿಕೆ ಪೋಸ್ಟರ್ ಬಿಡುಗಡೆ ಮಾಡಿ, ‘ಸಿನಿಮಾ ಪವರ್ ಫುಲ್ ಮೀಡಿಯಾ. ಸಾಮಾಜಿಕ ಸಂದೇಶ ಇರುವ ಇಂತ ಸಿನಿಮಾ ಹೆಚ್ಚಾಗಿ ಬರಬೇಕು. ಆಗ…

  • ಜುಲೈ 17 ರಂದು ಚಿತ್ರಮಂದಿರಗಳಲ್ಲಿ “ಫಾದರ್ಸ್ ಡೇ” ..

    ಚಿತ್ರ ಬಿಡುಗಡೆಗೂ ಮುನ್ನ ಪ್ರಮೋಷನ್ ಸಾಂಗ್ ಬಿಡುಗಡೆ ಮಾಡಿದ ಚಿತ್ರತಂಡ ELEVEN ELEMENTS ಸಂಸ್ಥೆ ಲಾಂಛನದಲ್ಲಿ ರಾಜಾರಾಮ್ ರಾಜೇಂದ್ರನ್ ನಿರ್ಮಾಣದ ಜೊತೆಗೆ ನಿರ್ದೇಶನವನ್ನೂ ಮಾಡಿರುವ ಚಿತ್ರ “ಫಾದರ್ಸ್ ಡೇ”. ತಂದೆ – ಮಗನ ಬಾಂಧವ್ಯ ಸಾರುವ ಈ ಚಿತ್ರ ಇದೇ ಜುಲೈ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದೊಂದು ಕನ್ನಡದ ಮೊದಲ ಬೈಕ್ ರೈಡರ್ ಚಿತ್ರವಾಗಿದೆ. ಚಿತ್ರ ಬಿಡುಗಡೆಗೂ ಪೂರ್ವದಲ್ಲಿ ALL OK ಸಾರಥ್ಯದಲ್ಲಿ ಮೂಡಿಬಂದಿರುವ ಪ್ರಮೋಷನ್ ಸಾಂಗ್ ಅನ್ನು ಚಿತ್ರತಂಡ ಅನಾವರಣ ಮಾಡಿದೆ. ಹಾಡು ಬಿಡುಗಡೆ ನಂತರ…

  • “ಮಹಾನ್” ನಾಯಕನಾಗಿ ವಿಜಯ ರಾಘವೇಂದ್ರ

    ಯುಗಾದಿ ಸಂದರ್ಭದಲ್ಲಿ ಶೀರ್ಷಿಕೆ ಅನಾವರಣ ಮಾಡಿ‌ ಶುಭಕೋರಿದ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಕನ್ನಡದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ನಿರ್ದೇಶನದ, ಪ್ರತಿಷ್ಠಿತ ಅಲೆಯನ್ಸ್ ಯೂನಿವರ್ಸಿಟಿ ವಿದ್ಯಾ ಸಂಸ್ಥೆಯ ಸಹಯೋಗದೊಂದಿಗೆ ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಅವರು ನಿರ್ಮಿಸುತ್ತಿರುವ ನೂತನ ಚಿತ್ರಕ್ಕೆ “ಮಹಾನ್” ಎಂದು ಹೆಸರಿಡಲಾಗಿದೆ. “ಚಿನ್ನಾರಿಮುತ್ತ” ವಿಜಯ ರಾಘವೇಂದ್ರ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆಯನ್ನು ಯುಗಾದಿ ಹಬ್ಬದ ಸಂದರ್ಭದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅನಾವರಣ ಮಾಡಿದರು. ಶೀರ್ಷಿಕೆ ಅನಾವರಣ ಮಾಡಿ…

  • ‘ರಾಜಸ್ಥಾನ್’ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ “ತಾರಿಣಿ” ಆಯ್ಕೆ.

    _ವಿಭಿನ್ನ ಕಥೆಗಳ ಸಿನಿಮಾಗಳನ್ನು ನಿರ್ದೇಶಿಸಿ ಪ್ರಸಿದ್ದಿ ಪಡೆದಿರುವ ನಿರ್ದೇಶಕ ‘ಸಿದ್ದು ಪೂರ್ಣಚಂದ್ರ’ರವರು ಮತ್ತೊಂದು ಅಂತಹದೇ ಕಥೆ ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರ “ತಾರಿಣಿ”. ಪ್ರತಿಷ್ಟಿತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲೊಂದಾದ “ರಾಜಸ್ಥಾನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್” ಗೆ ‘ತಾರಿಣಿ’ ಆಯ್ಕೆಯಾಗಿದೆ ಎಂದು ಚಿತ್ರತಂಡದಿಂದ ಸಂತಸದ ಸುದ್ದಿ ಹೊರಬಂದಿದೆ. ಜನವರಿ ತಿಂಗಳಲ್ಲಿ ರಾಜಸ್ಥಾನದ ‘ಜೈಪುರ್” ನಲ್ಲಿ ತಾರಿಣಿ ಚಿತ್ರ ಪ್ರದರ್ಶನವಾಗುತ್ತದೆ. ದೇಶದ ವಿವಿಧ ಭಾಗಗಳಿಂದ ಬರುವ ಚಿತ್ರ ಪ್ರೇಮಿಗಳು ಈ ಚಿತ್ರವನ್ನು ಕಣ್ತುಂಬಿಕೊಳ್ಳುವರು ಎಂದು ಚಿತ್ರದ ನಿರ್ದೇಶಕ “ಸಿದ್ದು ಪೂರ್ಣಚಂದ್ರ” ರವರು…

  • ನಾಯಕ ಮಿಲಿಂದ್ ಹುಟ್ಟುಹಬ್ಬಕ್ಕೆ “ಅನ್ ಲಾಕ್ ರಾಘವ” ಚಿತ್ರತಂಡದಿಂದ ಹಾಡಿನ ಉಡುಗೊರೆ .!!

    ಚಿತ್ರ ಆರಂಭವಾದಗಿನಿಂದಲೂ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ “ಅನ್ ಲಾಕ್ ರಾಘವ” ಚಿತ್ರದ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿದೆ. ಹೃದಯಶಿವ ಅವರು ಬರೆದು, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿ, ಸಾಯಿ ವಿಘ್ನೇಶ್ ಹಾಡಿರುವ “ನನ್ನ ಹುಡುಗಿ” ಎಂಬ ಹಾಡು ನಾಯಕ ಮಿಲಿಂದ್ ಹುಟ್ಟುಹಬ್ಬದಂದು A2 music ಮೂಲಕ ಬಿಡುಗಡೆಯಾಗಿ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಹಾಡು ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಹೆಚ್ಚಿನ ಮಾಹಿತಿ ನೀಡಿದರು. ಹಲವು ವಿಶೇಷಗಳನ್ನು ಹೊಂದಿರುವ “ಅನ್ ಲಾಕ್ ರಾಘವ” ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ…

0 0 votes
Article Rating
Subscribe
Notify of
guest
0 Comments
Oldest
Newest Most Voted