ಸರ್ವರ ಮನಸ್ಸಿಗೂ ಹತ್ತಿರವಾಗಲಿದೆ “ಸರ್ವಸ್ವ” ಹಾಡು . ಸೆಪ್ಟೆಂಬರ್ 20 ರಿಂದ ಪಿ.ಆರ್.ಕೆ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಈ ಹಾಡು ಲಭ್ಯ .

ಈ ಹಿಂದೆ “ಲೈಫ್ 360” ಚಿತ್ರದಲ್ಲಿ ನಟಿಸಿದ್ದ ಅರ್ಜುನ್ ಕಿಶೋರ್ ಚಂದ್ರ ನಟಿಸಿ, ನಿರ್ದೇಶಿಸಿರುವ ಹಾಗೂ ರಾಜಶೇಖರ್ ಎಸ್ ನಿರ್ಮಿಸಿರುವ “ಸರ್ವಸ್ವ” ಮ್ಯೂಸಿಕ್ ವಿಡಿಯೋ ಸಾಂಗ್ ಇತ್ತೀಚೆಗೆ ಬಿಡುಗಡೆಯಾಯಿತು. ಹಿರಿಯ ಸಾಹಿತಿ ದೊಡ್ಡರಂಗೇಗೌಡ, ಸೋಮಶೇಖರ್, ತಾರಾ ಅನುರಾಧಾ, ಸುಚೇಂದ್ರ ಪ್ರಸಾದ್, ಲಹರಿ ವೇಲು ಮುಂತಾದವರು ಹಾಡು ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು. ಆನಂತರ ಹಾಡಿನ ಬಗ್ಗೆ ಅನೇಕರು ಮಾತನಾಡಿದರು.

ನಮ್ಮ ತಾಯಿಯವರ ಹೆಸರಿನಲ್ಲಿ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಈಗ ಸಾಯಿ ಗಗನ್ ಪ್ರೊಡಕ್ಷನ್ಸ್ ಜೊತೆ ಸೇರಿ “ಸರ್ವಸ್ವ” ಹಾಡನ್ನು ನಿರ್ಮಾಣ ಮಾಡಿದ್ದೇವೆ. ತಾಯಿ – ಮಗುವಿನ ಮಹತ್ವ ಸಾರುವ ಈ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ ಎಂದರು ನಿರ್ಮಾಪಕ ರಾಜಶೇಖರ್ ಎಸ್.

ನಾನು ಪುನೀತ್ ರಾಜಕುಮಾರ್ ಅಭಿಮಾನಿ ಎಂದು ಮಾತನಾಡಿದ ನಿರ್ದೇಶಕ , ನಟ ಅರ್ಜುನ್ ಕಿಶೋರ್ ಚಂದ್ರ, ಈ ಹಾಡನ್ನು ಪಿ.ಆರ್.ಕೆ ಆಡಿಯೋದವರು ಬಿಡುಗಡೆ ಮಾಡುತ್ತಿರುವುದು ಸಂತೋಷವಾಗಿದೆ. ನಾನೇ ಬರೆದಿರುವ ಈ ಹಾಡನ್ಬು ಸೆಪ್ಟೆಂಬರ್ 20ರಿಂದ ಪಿ.ಆರ್.ಕೆ ಆಡಿಯೋ ಯೂಟ್ಯೂಬ್ ನಲ್ಲಿ ವೀಕ್ಷಿಸಬಹುದು. ಈ ಹಾಡಿನ ಚಿತ್ರೀಕರಣ ಯೂರೋಪ್ ನಲ್ಲಿ ನಡೆದಿದೆ. ಇದು ಬರೀ ಹಾಡಲ್ಲ. ಕಮರ್ಷಿಯಲ್ ಚೌಕ್ಕಟ್ಟಿನೊಳಗೆ ಒಂದೊಳ್ಳೆ ಸಂದೇಶವನ್ನು ಈ ಹಾಡಿನ ಮೂಲಕ ಕೊಡುವ ಪ್ರಯತ್ನ ಮಾಡಿದ್ದೇವೆ. “ಸರ್ವಸ್ವ” ಹಾಡು ಸರ್ವರ ಮನಸ್ಸಿಗೂ ಹತ್ತಿರವಾಗಲುದೆ. ಹಾಡು ಚೆನ್ನಾಗಿ ಮೂಡಿಬರಲು ಇಲ್ಲಿನ ಹಾಗೂ ಅಲ್ಲಿನ(ಯೂರೋಪ್)ನ ತಂತ್ರಜ್ಞರ ಸಹಕಾರವೇ ಕಾರಣ. ಇಂದು ಹಾಡು ಬಿಡುಗಡೆ ಮಾಡಿಕೊಟ್ಟ ಪ್ರತಿಯೊಬ್ಬ ಗಣ್ಯರಿಗೂ ಧನ್ಯವಾದ ಎಂದರು.

ಸಂಗೀತ ನೀಡಿರುವ ಚೇತನ್ ರಾವ್ ಹಾಗೂ ಡಿಐ, ವಿ ಎಫ್ ಎಕ್ಸ್ ನೊಂದಿಗೆ ಸಂಕಲನವನ್ನು ಮಾಡಿರುವ S I D ಹಾಡಿನ ಬಗ್ಗೆ ಮಾತನಾಡಿದರು.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments