ಡಿಪಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಡಿಪಿ ವೆಂಕಟೇಶ್ ನಿರ್ಮಾಣದ ಚಿತ್ರ RR77

ಇನ್ನು ಚಿತ್ರದ ಮುಖ್ಯ ಭೂಮಿಕೆಯಲ್ಲಿ ಡಾ. ರಾಜ್‌ವೀರ್ ಅಭಿನಯಿಸಲಿದ್ದಾರೆ ಚಿತ್ರದ ಶೀರ್ಷಿಕೆಯೊಂದಿಗೆ ಎಲ್ಲರ ಗಮನವನ್ನು ಸೆಳೆಯಲು ಯಾವ ಅನುಮಾನವೂ ಇಲ್ಲ ಎಂದು ಚಿತ್ರದ ನಿರ್ದೇಶಕ ಮಂಜು ಕವಿ ತಿಳಿಸಿದರು ಸಂಪೂರ್ಣ ಕಥೆಯನ್ನು ಕೇಳಿ ಡಿಪಿ ವೆಂಕಟೇಶ್ ರವರು ಕಥೆ ತುಂಬ ಮನಸ್ಸಿಗೆ ಹತ್ತಿರವಾಗಿದೆ ಇಂತಹ ಕಥೆಗಾಗಿ ಕಾಯುತ್ತಿದ್ದೆ ಕರ್ನಾಟಕದ ಜನತೆಗೆ ನಮ್ಮ ಸಿನಿಮಾ ಕೊಡುಗೆಯಾಗಲಿ ಎಂದು ತಿಳಿಸಿ ಬಂಡವಾಳ ಹೂಡಲಿದ್ದಾರೆ ಇನ್ನು ಚಿತ್ರದಲ್ಲಿ

ಹಾಡುಗಳಿದ್ದು ಎಲ್ಲರ ಗಮನ ಸೆಳೆಯುತ್ತದೆ ಎಂದು ಮಂಜು ಕವಿ ತಿಳಿಸಿದರು ನಿರ್ದೇಶನ ತಂಡದಲ್ಲಿ ಎಸ್ ಜೆ ಸಂಜಯ್ ದಯಾ ಗಿರೀಶ್ ಸಾಕಿ ಸಂಗೀತ ಶೆಟ್ಟಿ ಕಾರ್ಯನಿರ್ವಹಿಸಿದ್ದಾರೆ ಇನ್ನು ಛಾಯಾಗ್ರಹಣ ರಾಜಕಡುರ್ ಇನ್ನು ಚಿತ್ರದಲ್ಲಿ ಎನ್ ಟಿ ರಾಮಸ್ವಾಮಿಗೌಡ ತುಷಾರ್ ವಿನೋದ್ ಸನತ್ ಜಗದೀಶ್ ಕೊಪ್ಪ ಪವಿತ್ರ ಗೊಬ್ಬರಗಾಲ ಚಂದ್ರಪ್ರಭ ವಿಕ್ಟರಿ ಸಿಲ್ಲಿ ಲಲ್ಲಿ ಚಿದಾನಂದ ಇನ್ನು ಅನೇಕ ಹಿರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಧರಣಿ ಹಾಗೂ ನಿಕಿತ ಸ್ವಾಮಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಇನ್ನು ಚಿತ್ರಕ್ಕೆ ನಾಲ್ಕು ಹಾಡುಗಳು ಮಂಜು ಕವಿ ರಚಿಸಿ , ರಾಗ ಸಂಯೋಜನೆ ಮಾಡಿದ್ದಾರೆ ನಾಲ್ಕು ಹಾಡುಗಳಿಗೆ ಉತ್ತಮವಾದ ವಾದ್ಯ ಸಂಯೋಜನೆ ವಿಜಯ ಹರಿತ್ಸ. ವಿನು ಮನಸ್ಸು ನೀಡಿದ್ದಾರೆ ಚಿತ್ರಕಥೆಗೆ ಸೂಕ್ತವಾದ ಕಲಾವಿದ ಡಾ. ರಾಜ್ ವೀರ್ ಎಂದು ಮಂಜು ಕವಿ ಆಯ್ಕೆ ಮಾಡಿಕೊಂಡಿದ್ದಾರೆ ಸದ್ಯದಲ್ಲೇ ಚಿತ್ರೀಕರಣ ಶುರು ಮಾಡಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದಾರೆ ಚಿತ್ರಕ್ಕೆ ನೃತ್ಯ ಸಂಯೋಜನೆ ಜಗ್ಗು ಅವರು ಕಾರ್ಯನಿರ್ವಹಿಸಿದ್ದಾರೆ ಇನ್ನು ಚಿತ್ರದ ಮೊದಲನೇ ಪೋಸ್ಟರ್ ಲುಕ್ಕನ್ನು ರಂಭಾಪುರಿ ಶ್ರೀಗಳು ಬಿಡುಗಡೆ ಮಾಡಿ ಡಾ. ರಾಜ್ ವೀರ್ ರವರ ಮೊದಲನೆ ಲುಕ್ಕು ಬಹಳ ಸುಂದರವಾಗಿ ಕಾಣುತ್ತದೆ ಎಂದು ರಂಭಾಪುರಿ ಜಗದ್ಗುರುಗಳು ತಿಳಿಸಿ RR77 ಚಿತ್ರ ತಂಡಕ್ಕೆ ಶುಭ ಹಾರೈಸಿದರು

Similar Posts

  • ಅಂದುಕೊಂಡ ರೀತಿಯಲ್ಲೇ ಚಿತ್ರೀಕರಣ ಪೂರ್ಣ. “Congratulations ಬ್ರದರ್

    ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಸುಪ್ರೀಂ ಹೀರೋ ಶಶಿಕುಮಾರ್ ನಟನೆ .ಮುಂದಿನ ತಿಂಗಳು ಚಿತ್ರದ ಮೊದಲ ಹಾಡು ದುಬೈನಲ್ಲಿ ಬಿಡುಗಡೆ ಸಾಮಾಜಿಕ ಮಾದ್ಯಮದಲ್ಲಿ ಸಾಕಷ್ಟು ಸದ್ದು ಮಾಡಿರುವ ಡೈಲಾಗ್ “Congratulations ಬ್ರದರ್”. ಕಳೆದ ಮೂರು ತಿಂಗಳ ಹಿಂದೆ ಇದೇ ಹೆಸರಿನಲ್ಲಿ ಚಿತ್ರ ಆರಂಭವಾಗಿದ್ದು ಎಲ್ಲರಿಗೂ ತಿಳಿದ ಸಂಗತಿ. ಈಗ ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರದ ಚಿತ್ರೀಕರಣ ನಿಗದಿಯಂತೆ ಪೂರ್ಣವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ.‌ ಮುಂದಿನ ತಿಂಗಳು ಚಿತ್ರದ ಮೊದಲ ಹಾಡು ದುಬೈನಲ್ಲಿ…

  • ಮನಮೋಹಕವಾಗಿದೆ “ಲೇಡಿಸ್ ಬಾರ್” ಚಿತ್ರದ ಟೀಸರ್ ಹಾಗೂ ಹಾಡುಗಳು.

    ಡಿ.ಎಂ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಟಿ.ಎಂ.ಸೋಮರಾಜು ಅವರು ನಿರ್ಮಿಸಿರುವ ಹಾಗೂ ಮುತ್ತು ಎ.ಎನ್ ನಿರ್ದೇಶಿಸಿರುವ “ಲೇಡಿಸ್ ಬಾರ್” ಚಿತ್ರದ ಟೀಸರ್ ಹಾಗೂ ಹಾಡುಗಳು ಇತ್ತೀಚಿಗೆ ಬಿಡುಗಡೆಯಾಯಿತು ರಾಜಕೀಯ ಮುಖಂಡರಾದ ಎಂ.ಡಿ.ಲಕ್ಷ್ಮೀನಾರಾಯಣ್ ಟೀಸರ್ ಬಿಡುಗಡೆ ಮಾಡಿದರು. ಹಾಡುಗಳನ್ನು ನಟಿ ರೂಪಿಕಾ, ಮಮತ ಹಾಗೂ ನಿರ್ಮಾಪಕ ಶಿಲ್ಪ ಶ್ರೀನಿವಾಸ್ ಹಾಡುಗಳನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಸಿರಿ ಮ್ಯೂಸಿಕ್ ಮೂಲಕ ಹಾಡುಗಳು ಲೋಕಾರ್ಪಣೆಯಾಗಿದೆ. ನಂತರ ಚಿತ್ರತಂಡದ ಸದಸ್ಯರು “ಲೇಡಿಸ್ ಬಾರ್” ಕುರಿತು ಮಾಹಿತಿ ನೀಡಿದರು. “ಲೇಡಿಸ್ ಬಾರ್” ಶೀರ್ಷಿಕೆ ಕೇಳಿದ ತಕ್ಷಣ…

  • ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿದ “ಇದು ನಮ್ ಶಾಲೆ”

    ಶ್ರೀ ಜೇನುಕಲ್ ಪ್ರೊಡಕ್ಷನ್ ಇವರ ಮೊದಲ ಕಾಣಿಕೆ, “ಇದು ನಮ್ ಶಾಲೆ” ಮಕ್ಕಳ ಸಿನಿಮಾದ ಮೊದಲ ಹಂತದ ಚಿತ್ರೀಕರಣವು ಅರಸೀಕೆರೆ ಜೇನುಕಲ್ ಹಾಗೂ ಗೀಜಿಹಳ್ಳಿ ವ್ಯಾಪ್ತಿಯಲ್ಲಿ ಸುಮಾರು 15 ದಿನಗಳ ಕಾಲ ನಿರಂತರವಾಗಿ ನಡೆಯಿತು.ಕೃಷ್ಣ ಬೆಳ್ತಂಗಡಿ ಕಥೆ ಚಿತ್ರಕತೆ ಸಂಭಾಷಣೆ ಬರೆದು ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ರವಿ ಆಚಾರ್ ಹಾಗೂ ಉಮೇಶ್ ಆಚಾರ್ ನಿರ್ಮಾಣ ಮಾಡಿದ್ದಾರೆ. ನಾಗರಾಜ್ ಅದವಾನಿ ಛಾಯಾಗ್ರಾಹಣ, ಹಿತನ್ ಹಾಸನ್ ಸಂಗೀತ ಈ ಸಿನಿಮಾಕ್ಕಿದ್ದು, ಪುಣ್ಯ ಹಾಗೂ ಪೂಜ್ಯ ಅನ್ನುವ ಇಬ್ಬರು ಹೆಣ್ಣು…

  • ಟೀಸರ್ ನಲ್ಲೇ ಕುತೂಹಲ ಮೂಡಿಸಿದ “ಅಲೆಕ್ಸಾ” .

    ಪವನ್ ತೇಜ್ – ಅದಿತಿ ಪ್ರಭುದೇವ ಅಭಿನಯದ ಈ ಚಿತ್ರ ನವೆಂಬರ್ ನಲ್ಲಿ ತೆರೆಗೆ. ಪವನ್ ತೇಜ್ ಹಾಗೂ ಅದಿತಿ ಪ್ರಭುದೇವ ಪ್ರಮುಖಪಾತ್ರದಲ್ಲಿ ನಟಿಸಿರುವ “ಅಲೆಕ್ಸಾ” ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಯಿತು. ಜೀವ ನಿರ್ದೇಶಿಸಿರುವ ಈ ಚಿತ್ರದ ಟೀಸರ್ ರಿದಂ ಮ್ಯೂಸಿಕ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ವಿ.ಚಂದ್ರು ನಿರ್ಮಾಣದ ಈ ಚಿತ್ರ ನವೆಂಬರ್ ನಲ್ಲಿ ತೆರೆಗೆ ಬರುತ್ತಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು. ಇದೊಂದು ಮರ್ಡರ್ ಮಿಸ್ಟರಿ ಚಿತ್ರ….

  • ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆದ ‘ನನ್ನ ಮಗಳೇ ಸೂಪರ್ ಸ್ಟಾರ್

    ಹನಿ ಫಿಲಂ ಮೇಕರ್ಸ್ ಲಾಂಛನದಲ್ಲಿ ಎನ್ ಎ.ಶಿವಕುಮಾರ್ (ಕುಮಾರ್ ನೊಣವಿನಕೆರೆ) ಹಾಗು ಸಹ ನಿರ್ಮಾಪಕ ಮಾಧವಾನಂದ Y ನಿರ್ಮಿಸುತ್ತಿರುವ ‘ನನ್ನ ಮಗಳೇ ಸೂಪರ್ ಸ್ಟಾರ್ ’ಕನ್ನಡ ಚಲನಚಿತ್ರದ ಅಂತಿಮ ಹಂತದ ಚಿತ್ರೀಕರಣ ಮುಗಿಸಿ, ಚಿತ್ರತಂಡ 14/10/2025 ಮಂಗಳವಾರ ಗುಬ್ಬಿ ಗೂಡು ವೆಜ್ ರೆಸಾರ್ಟ್ ನಲ್ಲಿ ಕುಂಬಳಕಾಯಿ ಒಡೆಯಿತು. ಚಿತ್ರೀಕರಣ ಬೆಂಗಳೂರು ಹಾಗು ಸುತ್ತ-ಮುತ್ತ ಜರುಗಿದ್ದು ಚಿತ್ರದ ಟೈಟಲ್ ಸಾಂಗ್ ಪೂರಕ ಸನ್ನಿವೇಶಗಳನ್ನು ನಿರ್ದೇಶಕ ಆಯುರ್ ನಿರ್ದೇಶನದಲ್ಲಿ ಛಾಯಾಗ್ರಾಹಕ ಸಚಿನ್ ಚಿತ್ರೀಕರಿಸಿಕೊಂಡರು ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗಿದ್ದ ಜನಪ್ರಿಯ ಧಾರಾವಾಹಿ…

  • ಟೀಸರ್ ನಲ್ಲೇ ಕುತೂಹಲ ಮೂಡಿಸಿದ “ಸಪ್ಲೇಯರ್ ಶಂಕರ” .

    ತ್ರಿನೇತ್ರ ಫಿಲಂಸ್ ಲಾಂಛನದಲ್ಲಿ ಎಂ ಚಂದ್ರಶೇಖರ್ ಹಾಗೂ ಎಂ.ನಾಗೇಂದ್ರ ಸಿಂಗ್ ನಿರ್ಮಿಸಿರುವ ಹಾಗೂ ರಂಜಿತ್ ನಿರ್ದೇಶನದಲ್ಲಿ ನಿಶ್ಚಿತ್ ಕರೋಡಿ ನಾಯಕನಾಗಿ ನಟಿಸಿರುವ “ಸಪ್ಲೇಯರ್ ಶಂಕರ” ಚಿತ್ರದ ಟೀಸರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಚಿತ್ರದ ನಿರ್ಮಾಪಕರಾದ ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ನಿರ್ದೇಶಕ ರಂಜಿತ್ ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆವು. ಚಿತ್ರ ಈಗ ತೆರೆಗೆ ಬರಲು ಸಿದ್ದವಾಗಿದೆ. ಸದ್ಯದಲ್ಲೇ ತೆರೆಗೆ ತರುತ್ತೇವೆ ಎಂದು ನಿರ್ಮಾಪಕರಾದ ಚಂದ್ರಶೇಖರ್ ಹಾಗೂ ನಾಗೇಂದ್ರ…

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments