ಟೀಸರ್ ನಲ್ಲೇ ಕುತೂಹಲ ಮೂಡಿಸಿದ “ಅಲೆಕ್ಸಾ” .

ಟೀಸರ್ ನಲ್ಲೇ ಕುತೂಹಲ ಮೂಡಿಸಿದ “ಅಲೆಕ್ಸಾ” .

ಪವನ್ ತೇಜ್ – ಅದಿತಿ ಪ್ರಭುದೇವ ಅಭಿನಯದ ಈ ಚಿತ್ರ ನವೆಂಬರ್ ನಲ್ಲಿ ತೆರೆಗೆ. ಪವನ್ ತೇಜ್ ಹಾಗೂ ಅದಿತಿ ಪ್ರಭುದೇವ ಪ್ರಮುಖಪಾತ್ರದಲ್ಲಿ ನಟಿಸಿರುವ “ಅಲೆಕ್ಸಾ” ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಯಿತು. ಜೀವ ನಿರ್ದೇಶಿಸಿರುವ ಈ ಚಿತ್ರದ ಟೀಸರ್ ರಿದಂ ಮ್ಯೂಸಿಕ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ವಿ.ಚಂದ್ರು ನಿರ್ಮಾಣದ ಈ ಚಿತ್ರ ನವೆಂಬರ್ ನಲ್ಲಿ ತೆರೆಗೆ ಬರುತ್ತಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು. ಇದೊಂದು ಮರ್ಡರ್ ಮಿಸ್ಟರಿ ಚಿತ್ರ….

ನೂತನ ವಾಗಿ ಅನಾವರಣಗೊಂಡ ವಿನೋದ್ ಪ್ರಭಾಕರ್ ಅಭಿನಯದ “ಫೈಟರ್ ” ಚಿತ್ರದ ಬಿಡುಗಡೆ ದಿನಾಂಕ

ನೂತನ ವಾಗಿ ಅನಾವರಣಗೊಂಡ ವಿನೋದ್ ಪ್ರಭಾಕರ್ ಅಭಿನಯದ “ಫೈಟರ್ ” ಚಿತ್ರದ ಬಿಡುಗಡೆ ದಿನಾಂಕ

ಕನ್ನಡಪರ ಸಂಘಟನೆಗಳ ಹೋರಾಟಗಾರರು, ನಿವೃತ್ತ ನ್ಯಾಯಾಧೀಶರು,ಮಾನವಹಕ್ಕು ಮಹಿಳಾ ಅಧ್ಯಕ್ಷರು,ಅನೇಕ ಚಳುವಳಿ ಹೋರಾಟಗಾರರಿಂದ “ಫೈಟರ್” ಚಿತ್ರದ ಬಿಡುಗಡೆ ದಿನಾಂಕ ಘೋಷಣೆ . ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಾಣದ, ನೂತನ್ ಉಮೇಶ್ ನಿರ್ದೇಶನದ ಹಾಗೂ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಫೈಟರ್” ಚಿತ್ರದ ಬಿಡುಗಡೆ ದಿನಾಂಕ ನೂತನವಾಗಿ ಅನಾವರಣವಾಯಿತು. ಕನ್ನಡಪರ ಸಂಘಟನೆಗಳ ಹೋರಾಟಗಾರರು, ನಿವೃತ್ತ ನ್ಯಾಯಾಧೀಶರು,ಮಾನವಹಕ್ಕು ಮಹಿಳಾ ಅಧ್ಯಕ್ಷರು, ಅನೇಕ ಚಳುವಳಿ ಹೋರಾಟಗಾರರಿಂದ “ಫೈಟರ್” ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಯಿತು. ಬಹು ನಿರೀಕ್ಷಿತ ಈ ಚಿತ್ರ ಅಕ್ಟೋಬರ್ 6…

ಪ್ರಮೋದ್ ಶೆಟ್ಟಿ ಅಭಿನಯದ “ಜಲಂಧರ” ಚಿತ್ರಕ್ಕೆ ಮಾತಿನ ಮರು ಜೋಡಣೆ(ಡಬ್ಬಿಂಗ್) ಮುಕ್ತಾಯ .

ಪ್ರಮೋದ್ ಶೆಟ್ಟಿ ಅಭಿನಯದ “ಜಲಂಧರ” ಚಿತ್ರಕ್ಕೆ ಮಾತಿನ ಮರು ಜೋಡಣೆ(ಡಬ್ಬಿಂಗ್) ಮುಕ್ತಾಯ .

“ಜಲಂಧರ” ಚಿತ್ರತಂಡ ಇತ್ತೀಚೆಗೆ ಪ್ರಮೋದ್ ಶೆಟ್ಟಿ ಅವರ ಹುಟ್ಟು ಹಬ್ಬದ ಉಡುಗೊರೆಯಾಗಿ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿತ್ತು. ಚಿತ್ರದ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ  ಜನಪ್ರಿಯತೆ ಗಳಿಸಿದ ಬೆನ್ನಲ್ಲೆ  “ಜಲಂಧರ” ಚಿತ್ರತಂಡ, ಮಾತಿನ ಮರು ಜೋಡಣೆ ( ಡಬ್ಬಿಂಗ್ ) ಅನ್ನು  ಯಶಸ್ವಿಯಾಗಿ  ಪೂರ್ಣಗೊಳಿಸಿದ ಖುಷಿಯಲ್ಲಿದ್ದಾರೆ. ಸ್ಟೇಪ್ ಅಪ್ ಲೋಕೇಶ್ ನಟಿಸಿ, ಕತೆ ಬರೆದು ಸ್ಟೇಪ್ ಅಪ್ ಪಿಚ್ಚರ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿರುವ “ಜಲಂಧರ” ಚಿತ್ರಕ್ಕೆ ಮದನ್ ಎಸ್, ಚಂದ್ರ ಮೋಹನ್ ಸಿ ಎಲ್,…

ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ “ದ ಜಡ್ಜ್ ಮೆಂಟ್” ಚಿತ್ರಕ್ಕೆ ಅದ್ದೂರಿ ಕ್ಲೈಮ್ಯಾಕ್ಸ್

ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ “ದ ಜಡ್ಜ್ ಮೆಂಟ್” ಚಿತ್ರಕ್ಕೆ ಅದ್ದೂರಿ ಕ್ಲೈಮ್ಯಾಕ್ಸ್

ಜಿ9 ಕಮ್ಯೂನಿಕೇಷನ್ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ “ದ ಜಡ್ಜ್ ಮೆಂಟ್” ಚಿತ್ರದ ಮಧ್ಯಾಂತರ ಮತ್ತು ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಇತ್ತೀಚಿಗೆ ಮೈಸೂರು ರಸ್ತೆಯಲ್ಲಿ ಇರುವ ಸಶಸ್ತ್ರ ಮೀಸಲು ಪಡೆ ಕಚೇರಿಯ ಆವರಣದಲ್ಲಿ ನಡೆಯಿತು. ರವಿಚಂದ್ರನ್, ದಿಗಂತ್, ಲಕ್ಷ್ಮೀ ಗೋಪಾಲಸ್ವಾಮಿ, ರಂಗಾಯಣ ರಘು, ಬಾಲಾಜಿ ಮನೋಹರ್, ಸುಜಯ್ ಶಾಸ್ತ್ರಿ, ಜಗದೀಶ್ ಮಲ್ನಾಡ್, ರವಿಶಂಕರ್ ಗೌಡ, ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ ಮತ್ತು ಅರವಿಂದ್ ಕುಪ್ಳೀಕರ್ ಮುಂತಾದ ನುರಿತ ಕಲಾವಿದರು ಈ…

ಹೆಸರಾಂತ ಪೆನ್ ಸ್ಟುಡಿಯೋ ಸಂಸ್ಥೆಗೆ ಭಾರೀ ಮೊತ್ತಕ್ಕೆ ಮಾರಾಟವಾಯಿತು “ಘೋಸ್ಟ್” ಚಿತ್ರದ ಥಿಯೇಟ್ರಿಕಲ್, ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕು

ಹೆಸರಾಂತ ಪೆನ್ ಸ್ಟುಡಿಯೋ ಸಂಸ್ಥೆಗೆ ಭಾರೀ ಮೊತ್ತಕ್ಕೆ ಮಾರಾಟವಾಯಿತು “ಘೋಸ್ಟ್” ಚಿತ್ರದ ಥಿಯೇಟ್ರಿಕಲ್, ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕು

ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಿಸಿರುವ, ಶ್ರೀನಿ ನಿರ್ದೇಶನದ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ, ಬಹು ನಿರೀಕ್ಷಿತ “ಘೋಸ್ಟ್” ಚಿತ್ರದ ಥಿಯೇಟ್ರಿಕಲ್, ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. “ಆರ್ ಆರ್ ಆರ್”, “ಜವಾನ್” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುವ ಪೆನ್ ಸ್ಟುಡಿಯೋ ಸಂಸ್ಥೆ ಈಗ “ಘೋಸ್ಟ್” ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿದ್ದಾರೆ. ಕನ್ನಡ, ತಮಿಳು ಹಾಗೂ ಮಲೆಯಾಳಂ ಭಾಷೆಗಳನ್ನು…

ಚಂದನ್ ಶೆಟ್ಟಿ ಹುಟ್ಟುಹಬ್ಬದಂದು ಆರಂಭವಾಯಿತು “ನಾದ ಯೋಗಿ” ಯೂಟ್ಯೂಬ್ ಚಾನಲ್ .

ಚಂದನ್ ಶೆಟ್ಟಿ ಹುಟ್ಟುಹಬ್ಬದಂದು ಆರಂಭವಾಯಿತು “ನಾದ ಯೋಗಿ” ಯೂಟ್ಯೂಬ್ ಚಾನಲ್ .

ಗಂ ಗಣಪತಿ ಹಾಡಿನ ಮೂಲಕ ನೂತನ ಚಾನಲ್ ಪ್ರಾರಂಭ ಸಂಗೀತ ನಿರ್ದೇಶಕ, ಗಾಯಕ ಹಾಗೂ ಈಗ ನಾಯಕನಾಗೂ ಚಂದನ್ ಶೆಟ್ಟಿ ಜನಪ್ರಿಯ. ಕಳೆದ ಎಂಟು ವರ್ಷಗಳ ಹಿಂದೆ ಚಂದನ್ ಶೆಟ್ಟಿ ತಮ್ಮ ಹುಟ್ಟುಹಬ್ಬದ ದಿನ ತಮ್ಮ ಮೊದಲ ಹಾಡು ಬಿಡುಗಡೆ ಮಾಡಿದ್ದರು‌. ಈ ಬಾರಿಯ ಹುಟ್ಟುಹಬ್ಬದಂದು ನಾದಯೋಗಿ ಎಂಬ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ. ಈ ನೂತನ ಯೂಟ್ಯೂಬ್ ಚಾನಲ್ ಗೆ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಚಾಲನೆ ನೀಡಿದರು. ಗಣಪತಿ ಹಬ್ಬದ ಸಂದರ್ಭದಲ್ಲಿ ಗಣಪತಿಯನ್ನು ಕುರಿತಾದ…