“ಕಾರ್ ಕಾರ್” ಎಂಬ ಸೂಪರ್ ಹಿಟ್ ಹಾಡು ಕೊಟ್ಟವರಿಂದ ಈಗ “ರನ್ ರನ್” ಹಾಡು. ” ..
” ಅಮೇರಿಕಾ ಅಮೇರಿಕಾ” TO “ಅಮೇರಿಕಾ ಅಮೇರಿಕಾ 2″ವರೆಗಿನ ಸ್ನೇಹ ಹಾಗೂ ಸಂಗೀತ ಪಯಣದ ಮೆಲಕು ಹಾಕಿದ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಮನೋಮೂರ್ತಿ. ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರ ಸೆಪ್ಟೆಂಬರ್ 11 ರಂದು ತೆರೆಗೆ . 90 ರ ದಶಕದ ಸೂಪರ್ ಹಿಟ್ ಚಿತ್ರ “ಅಮೇರಿಕಾ ಅಮೇರಿಕಾ “. ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶನದ ಈ ಚಿತ್ರದ ಮೂಲಕ ಅನಿವಾಸಿ ಭಾರತೀಯ ಮನೋಮೂರ್ತಿ ಎಂಬ ಸಂಗೀತ ನಿರ್ದೇಶಕನ ಉದಯವಾಯಿತು. ಈ ಚಿತ್ರ, ಕಥೆಯ ಜೊತೆಗೆ ಹಾಡುಗಳಿಂದ…
