ಮಾದೇಶ್ ಆರಾಧ್ಯ ನಿರ್ದೇಶನದ “RPF” – AI WEB SERIES” ಗೆ ಮಧು ಮಂದಗೆರೆ ನಾಯಕ.

ಈಗ AI ಜಗತ್ತು. ಈ ತಂತ್ರಜ್ಞಾನದಿಂದ ಸಾಧ್ಯವಾಗದ್ದು ಯಾವುದು ಇಲ್ಲ. ಈಗ ಇದೇ ತಂತ್ರಜ್ಞಾನ ಬಳಸಿಕೊಂಡು “RPF” ವೆಬ್ ಸಿರೀಸ್ ನಿರ್ಮಾಣವಗುತ್ತಿದೆ. ರಾಯರ ಕೃಪೆಯಿಂದ ತಶ್ವಿಶೈವಿ ಪ್ರೊಡಕ್ಷನ್ ಲಾಂಛನದಲ್ಲಿ ಮಧು ಮಂದಗೆರೆ ನಿರ್ಮಿಸುತ್ತಿರುವ ಈ ವೆಬ್ ಸರಣಿಯನ್ನು ಮಾದೇಶ್ ಆರಾಧ್ಯ ನಿರ್ದೇಶಿಸುತ್ತಿದ್ದು, ಮಧು ಮಂದಗೆರೆ ನಯಕನಾಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ವೆಬ್ ಸರಣಿಯ ಟೀಸರ್ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ನಡೆಯಿತು.
ಇದು ಮಧು ಮಂದಗೆರೆಯ ಜೀವನದಲ್ಲಿ ನಡೆದಂತ

ಇದು ಮಧು ಮಂದಗೆರೆಯ ಜೀವನದಲ್ಲಿ ನಡೆದಂತ ನೈಜ ಘಟನೆಯೊಂದನ್ನು
ಆಧಾರವಾಗಿಟ್ಟುಕೊಂಡು ಮಾಡುತ್ತಿರುವ WEB SERIES ಆಗಿರುತ್ತದೆ. ಇದರ ವಿಶೇಷತೆ ಏನೆಂದರೆ ಈ ವೆಬ್ ಸಿರೀಸ್ ಅನ್ನು AI ತಂತ್ರಜ್ಞಾನವನ್ನು ಬಳಸಿಕೊಂಡು ಮಾಡುತ್ತಿದ್ದೇವೆ. ಕಲಾವಿದರ ಅಭಿನಯ ಮಾತ್ರ ನೈಜವಾಗಿರುತ್ತದೆ. ಉಳಿದಿದ್ದು AI ತಂತ್ರಜ್ಞಾನದೆ ಆಗಿರುತ್ತದೆ. ಇದನ್ನು ಕೆಲವು ವರ್ಷಗಳ ಹಿಂದ ಸಿನಿಮಾ ಮಾಡೋಣ ಅಂದು ಕೊಂಡೆವು ಆಗಲಿಲ್ಲ. ಈಗ ವೆಬ್ ಸಿರೀಸ್ ಮಾಡುತ್ತಿದ್ದೇವೆ. ಮೊದಲ ಹೆಜ್ಜೆಯಾಗಿ ಟೀಸರ್ ಬಿಡುಗಡೆ ಮಾಡಿದ್ದೇವೆ. ಈಗಾಗಲೇ ಐದಾರು ಕಂತುಗಳು ಸಿದ್ದವಾಗಿದೆ. ಯಾವಾಗ ಹಾಗೂ ಯಾವುದರಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಸದ್ಯದಲ್ಲೇ ತಿಳಿಸುತ್ತೇವೆ. ಸಹ ಹಾಗೂ ಸಹಾಯಕ ನಿರ್ದೇಶಕನಾಗಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ನನಗೆ ನಿರ್ದೇಶಕನಾಗಿ ಇದು ಮೊದಲ ಪ್ರಯತ್ನ ಎಂದರು ಮಾದೇಶ್ ಆರಾಧ್ಯ.

ನಾನು ಮೂವತ್ತು ವರ್ಷಗಳಿಂದ ಚಲನಚಿತ್ರ ಕಲಾವಿದ ಹಾಗೂ “RPF” ನೌಕರನಾಗಿ ಕಾರ್ಯ ನಿರ್ವಹಿಸಿದ್ದೇನೆ. “ವಂಶಿ” ಸೇರಿದಂತೆ ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ರೈಲ್ವೇ ಇಲಾಖೆಯಲ್ಲಿ ನಾನು ಕಂಡಿರುವ ನೈಜ ಘಟನೆಗಳು ಹಾಗೂ ಅಲ್ಲಿ ಅನುಭವಿಸಿರುವ ನೋವನ್ನು ಈ ವೆಬ್ ಸೀರಿಸ್ ಮೂಲಕ ಜನರಿಗೆ ತಲುಪಿಸುವ ಉದ್ದೇಶದಿಂದ ಈ ವೆಬ್ ಸಿರೀಸ್ ನಿರ್ಮಾಣ‌ ಮಾಡುತ್ತಿದ್ದೇನೆ. ಮಾದೇಶ್ ಆರಾಧ್ಯ ನಿರ್ದೇಶನ ಮಾಡುತ್ತಿದ್ದಾರೆ. ನನ್ನ ಪತ್ನಿ ವಾಣಿ ಸಹಕಾರ ನೀಡುತ್ತಿದ್ದಾರೆ. ಬಹುತೇಕ AI ತಂತ್ರಜ್ಞಾನ ಬಳಸಿಕೊಳ್ಳುತ್ತಿರುವುದು ವಿಶೇಷ. ಟೀಸರ್ ಬಿಡುಗಡೆ ಮಾಡಿದ್ದೇವೆ. ಆದಷ್ಟು ಬೇಗ ಮೊದಲ ಎಪಿಸೋಡ್ ಸಹ ಬಿಡುಗಡೆ ಮಾಡುತ್ತೇವೆ. ರಾಯರ ಕೃಪೆ ಲಾಂಛನದಲ್ಲಿ ಮೂಡಿಬರುತ್ತಿರುವ ನಮ್ಮ ಮೊದಲ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಹಾಗೂ ನಿರ್ಮಾಪಕ ಮಧು ಮಂದಗೆರೆ. ತಮ್ಮ ಪತಿ ಮಧು ಮಂದಗೆರೆ ಅವರ ಹೊಸ ಪ್ರಯತ್ನಕ್ಕೆ ವಾಣಿ ಮಧು ಮಂದಗೆರೆ ಅವರು ಶುಭ ಕೋರಿದರು.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted