ಕನ್ನಡ ಚಿತ್ರರಂಗದ ಅತ್ಯಂತ ನಿರೀಕ್ಷಿತ ಪ್ಯಾನ್-ಇಂಡಿಯಾ ದೈವಿಕ ಫ್ಯಾಂಟಸಿ ಚಿತ್ರ “ರಾಮರಸ” ದ ಭವ್ಯ ಬಿಡುಗಡೆಯ ದಿನಾಂಕ ಅಂತಿಮವಾಗಿದೆ!
ನಿರ್ದೇಶಕ ಬಿ.ಎಂ. ಗಿರಿರಾಜ್* ನಿರ್ದೇಶನದ, ಗುರು ದೇಶಪಾಂಡೆ ಮತ್ತು ವಿಕ್ರಂ ಆರ್ಯ ಅವರ ಬಿಗ್ ಬಜೆಟ್ ನಿರ್ಮಾಣದ ಈ ಸಿನಿಮಾ, ಫ್ಯಾಂಟಸಿ, ಜಾನಪದ ಮತ್ತು ಪರಾಶಕ್ತಿಯ ದೈವಿಕ ರಹಸ್ಯಗಳ ಅದ್ಭುತ ಸಮ್ಮಿಲನವಾಗಿದೆ.
ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ಬಾಲಿವುಡ್ ಸೆನ್ಸೇಷನ್ ಅದಾ ಶರ್ಮಾ ಮತ್ತು ಹೆಬಾ ಪಟೇಲ್ ಸೇರಿದಂತೆ ಬೃಹತ್ ತಾರಾಬಳಗ ಈ ಚಿತ್ರದಲ್ಲಿದೆ. ಪಾತ್ರದ ಅನಾವರಣದ ಬಗ್ಗೆ ಮಾತನಾಡಿದ ನಿರ್ಮಾಪಕ ಗುರು ದೇಶಪಾಂಡೆ, “ರಾಮರಸದ ಪ್ರತಿಯೊಂದು ಪಾತ್ರವೂ ಪ್ರೇಕ್ಷಕರಿಗೆ ಹೊಸ ಲೋಕವನ್ನೇ ತೆರೆದಿಡುತ್ತದೆ, ಇದು ಕೇವಲ ಸಿನಿಮಾವಲ್ಲ, ಒಂದು ದೈವಿಕ ಅನುಭವ” ಎಂದರು.
ರಾಮರಸದ ಬಗ್ಗೆ:
ಪರಂಪರಾಗತ ಜಾನಪದ ಮತ್ತು ಸ್ಥಳೀಯ ಆಧ್ಯಾತ್ಮಿಕ ಆಚರಣೆಗಳಿಂದ ಸ್ಫೂರ್ತಿ ಪಡೆದ, ದಶ ಮಹಾವಿದ್ಯೆಯರ ಹಿನ್ನೆಲೆಯುಳ್ಳ, ಪರಾಶಕ್ತಿಯ ದೈವಿಕ ಆಟವನ್ನು ಅನ್ವೇಷಿಸುವ ಬಿಗ್ಗೆಸ್ಟ್ ಫ್ಯಾಂಟಸಿ ಎಂಟರ್ಟೈನರ್.
💥 ಅಧಿಕೃತ ಬಿಡುಗಡೆ ದಿನಾಂಕ ಘೋಷಣೆ 💥
ರಾಮರಸ – ಡಿಸೆಂಬರ್ 11, 2026 ರಂದು ವಿಶ್ವದಾದ್ಯಂತ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಅದ್ಧೂರಿ ಬಿಡುಗಡೆ!
RAMARASA – GRAND PAN-INDIA RELEASE ON 11/12/2026
ಬೃಹತ್ ತಾರಾಗಣ:
- ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ – ಗುರು ಸಿದ್ಧನಾಗಿ
- ಕಾಮಿಡಿ ಕಿಂಗ್ ಶರಣ್
- ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್
- ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ – ಪ್ರಮುಖ ಪಾತ್ರದಲ್ಲಿ
- ಪ್ಯಾನ್-ಇಂಡಿಯಾ ಸ್ಟಾರ್ ಅದಾ ಶರ್ಮಾ – ಶಕ್ತಿಯುತ ಪಾತ್ರದಲ್ಲಿ
- ಹೆಬಾ ಪಟೇಲ್, ಬಾಲಾಜಿ ಮನೋಹರ್, ವೈಶಾಲಿ, ಆದಿತ್ಯಾ (ವೀರ ದುರ್ಮುರ್ಗಿಯಾಗಿ)
- ಇನ್ನೂ ಅನೇಕ ಊಹಿಸದ ಸೂಪರ್ ಸ್ಟಾರ್ ಗಳ ಎಂಟ್ರಿ ಬಾಕಿ ಇದೆ!
ಟೆಕ್ನಿಕಲ್ ಟೀಮ್ – ದಿ ಪವರ್ ಹೌಸ್:
- ನಿರ್ದೇಶನ: ಬಿ.ಎಂ. ಗಿರಿರಾಜ್
- ನಿರ್ಮಾಣ: ಗುರು ದೇಶಪಾಂಡೆ ಮತ್ತು ವಿಕ್ರಂ ಆರ್ಯ
- ಬ್ಯಾನರ್: ಜಿ ಸಿನಿಮಾಸ್ ಪ್ರೊಡಕ್ಷನ್ & ಸೆವೆನ್ ಸ್ಟಾರ್ ಮೂವೀಸ್
- ಕ್ರಿಯೇಟಿವ್ ಹೆಡ್: ಗುರು ದೇಶಪಾಂಡೆ
- ಛಾಯಾಗ್ರಹಣ: ಕೃಷ್ಣ ಕುಮಾರ್ (ಕೆಕೆ)
- ಸಂಗೀತ: ಬಿ.ಜೆ. ಭರತ್ | ಸಂಕಲನ: ಅರ್ಜುನ್ ಕಿಟ್ಟು
- ಕಲೆ: ಹೊಸ್ಮನೆ ಮೂರ್ತಿ
- ಸಾಹಿತ್ಯ: ಡಾ. ವಿ. ನಾಗೇಂದ್ರ ಪ್ರಸಾದ್, ನಾಗಾರ್ಜುನ್ ಶರ್ಮಾ, ಪುನೀತ್ ರಂಗಸ್ವಾಮಿ
- ಸಂಗೀತ ಲೇಬಲ್: 7 ಸ್ಟಾರ್ ಮ್ಯೂಸಿಕ್
ಉನ್ನತ ತಾಂತ್ರಿಕ ಗುಣಮಟ್ಟ:
ಸದ್ಯ ಪ್ರತಿಷ್ಠಿತ ಸ್ಟುಡಿಯೋಗಳಲ್ಲಿ ಹಾಲಿವುಡ್ ಮಟ್ಟದ VFX, ಎಡಿಟಿಂಗ್ ಮತ್ತು ಸೌಂಡ್ ಡಿಸೈನಿಂಗ್ ಕೆಲಸಗಳು ಭರದಿಂದ ಸಾಗುತ್ತಿವೆ. ದೃಶ್ಯ ವೈಭವಕ್ಕೆ ಹೊಸ ಭಾಷ್ಯ ಬರೆಯಲು ತಂಡ ಸಜ್ಜಾಗಿದೆ.
- ಡಿಸೆಂಬರ್ 11, 2026. ದೈವಿಕ ಅನುಭವಕ್ಕೆ ಸಜ್ಜಾಗಿ!
