ಪ್ರಮೋದ್ ಶೆಟ್ಟಿ ಅಭಿನಯದ “ಜಲಂಧರ” ಚಿತ್ರಕ್ಕೆ ಮಾತಿನ ಮರು ಜೋಡಣೆ(ಡಬ್ಬಿಂಗ್) ಮುಕ್ತಾಯ .

“ಜಲಂಧರ” ಚಿತ್ರತಂಡ ಇತ್ತೀಚೆಗೆ ಪ್ರಮೋದ್ ಶೆಟ್ಟಿ ಅವರ ಹುಟ್ಟು ಹಬ್ಬದ ಉಡುಗೊರೆಯಾಗಿ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿತ್ತು. ಚಿತ್ರದ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ  ಜನಪ್ರಿಯತೆ ಗಳಿಸಿದ ಬೆನ್ನಲ್ಲೆ  “ಜಲಂಧರ” ಚಿತ್ರತಂಡ, ಮಾತಿನ ಮರು ಜೋಡಣೆ ( ಡಬ್ಬಿಂಗ್ ) ಅನ್ನು  ಯಶಸ್ವಿಯಾಗಿ  ಪೂರ್ಣಗೊಳಿಸಿದ ಖುಷಿಯಲ್ಲಿದ್ದಾರೆ.

ಸ್ಟೇಪ್ ಅಪ್ ಲೋಕೇಶ್ ನಟಿಸಿ, ಕತೆ ಬರೆದು ಸ್ಟೇಪ್ ಅಪ್ ಪಿಚ್ಚರ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿರುವ “ಜಲಂಧರ” ಚಿತ್ರಕ್ಕೆ ಮದನ್ ಎಸ್, ಚಂದ್ರ ಮೋಹನ್ ಸಿ ಎಲ್, ರಮೇಶ್ ರಾಮಚಂದರ್ ಹಾಗೂ ಪದ್ಮನಾಭನ್ ಹಣ ಹಾಕಿ ಕೈ ಜೋಡಿಸಿದ್ದಾರೆ. ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಮೊದಲ ಬಾರಿಗೆ ವಿಷ್ಣು ವಿ ಪ್ರಸನ್ನ ನಿರ್ದೇಶನ ಮಾಡಿದ್ದಾರೆ.

ರಶ್ಮಿತ್ ಕುಮಾರ್  ನಿರ್ಮಾಣ ನಿರ್ವಹಣೆಯ ಕಾರ್ಯವನ್ನು  ವಹಿಸಿಕೊಂಡಿದ್ದು ಇನ್ನು ಚಿತ್ರಕ್ಕೆ ನುರಿತ ಸಂಕಲನಕಾರ ವೆಂಕಿ UDV ಕತ್ತರಿ ಹಾಕಿದ್ದಾರೆ. ಕೇರಳ ಮೂಲದ ಛಾಯಾಗ್ರಹಕರಾದ ವಿದ್ಯಾಶಂಕರ್ ಮತ್ತು ಸರಿನ್ ರವೀಂದ್ರನ್ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.
ಯುವ ಸಂಗೀತ ನಿರ್ದೇಶಕ ಜತಿನ್ ದರ್ಶನ್ ಸಂಗೀತ ನೀಡಿರುವ “ಜಲಂಧರ” ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಅಕ್ಷಯ್ ಕುಮಾರ್ ಎಮ್, ಕಲಾ ನಿರ್ದೇಶನ ರಾಜು ವೈವಿಧ್ಯ, ಸಾಹಸ  ನಿರ್ದೇಶಕರಾದ ಕೌರವ ವೆಂಕಟೇಶ್, ಪತ್ರಿಕಾ ಸಂಪರ್ಕ ಸುದೀಂದ್ರ ವೆಂಕಟೇಶ್ ರವರು ಕೈ ಜೋಡಿಸಿದ್ದಾರೆ.

ಚಿತ್ರದ ಮುಖ್ಯ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ, ಟಗರು ಖ್ಯಾತಿಯ ರುಷಿಕಾ ರಾಜ್, ರಾಘು ರಾಮನಕೊಪ್ಪ, ಅರೋಹಿತಾ ಗೌಡ, ಬಲ ರಾಜ್ವಡಿ, ಆದಿ ಕೇಶವರೆಡ್ಡಿ, ಭೀಷ್ಮ ರಾಮಯ್ಯ, ಪ್ರತಾಪ ನೆನಪು, ನವೀನ್ ಸಾಗರ್, ವಿಶಾಲ್ ಪಾಟೀಲ್, ಪ್ರಸಾದ್ ಸೂರನಹಳ್ಳಿ, ಅಂಬು, ವಿಜಯ್ ರಾಜ್ ಮತ್ತು ನಂದಿನಿ ರಾಜ್ ಅಭಿನಯಿಸಿದ್ದಾರೆ.

“ಜಲಂಧರ” ಚಿತ್ರ ತಂಡವೂ ತಮ್ಮ ಚಿತ್ರದ ಪ್ರತಿ ಸಣ್ಣ ತುಣುಕುಗಳನ್ನು ವಿಭಿನ್ನವಾಗಿ ಪ್ರಚಾರ ಮಾಡುತ್ತಾ ಸ್ಯಾಂಡಲ್ ವುಡ್ ನಲ್ಲಿ ಹೊಸ ಭರವಸೆ ಹುಟ್ಟಿಸುತ್ತಾ ಚಿತ್ರದ ಅಂತಿಮ ಘಟ್ಟದತ್ತ ಸಾಗಿದೆ.

Similar Posts

  • ಬಸವ ಪುರಸ್ಕಾರ 2026 ಪ್ರದಾನ: ವಿವಿಧ ಕ್ಷೇತ್ರಗಳ 14 ಗಣ್ಯರಿಗೆ ಗೌರವ

    ಬೆಂಗಳೂರು, ಅಕ್ಟೋಬರ್ 2, 2026: ಜಗಜ್ಯೋತಿ ಬಸವಣ್ಣನವರ ಸಮಾನತೆ, ಸಾಮಾಜಿಕ ಹೊಣೆಗಾರಿಕೆ, ಸೇವಾ ಮನೋಭಾವ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುವ ‘ಬಸವ ಪುರಸ್ಕಾರ 2026’ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು. ಪ.ಪೂ. ಮಹಾಜಗದ್ಗುರು ಡಾ. ಮಾತೆ ಗಂಗಾದೇವಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಸಂಸದ ಶ್ರೀ ಬಸವರಾಜ ಬೊಮ್ಮಾಯಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಹಕಾರ ಸಚಿವ *ಶ್ರೀ ಲಕ್ಷ್ಮಣ ಸವದಿ, ಮಾಜಿ ಸಚಿವ **ಶ್ರೀ ದಿನೇಶ್…

  • ಸಿರಿಕನ್ನಡದಲ್ಲಿ ‘ಅಮೃತಘಳಿಗೆ’ ಆರಂಭ.

    ಕಿರುತೆರೆ ಲೋಕದಲ್ಲಿ ಹಲವಾರು ಸೃಜನಾತ್ಮಕ ಕಾರ್ಯಕ್ರಮಗಳನ್ನು ನೀಡಿ ಕನ್ನಡಿಗರ ಮನದಲ್ಲಿ ಭದ್ರವಾದ ಸ್ಥಾನಗಳಿಸಿರುವ ಸಿರಿಕನ್ನಡ ವಾಹಿನಿ ಮತ್ತೊಂದು ಮೆಗಾ ಧಾರಾವಾಹಿಯೊಂದಿಗೆ ವೀಕ್ಷಕರಿಗೆ ಕನ್ನಡ ರಾಜ್ಯೋತ್ಸವದ ಉಡುಗೊರೆ ನೀಡಲು ಮುಂದಾಗಿದೆ. ಇದೇ ಅಕ್ಟೋಬರ್ 30 ರಿಂದ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9 ಗಂಟೆಗೆ ಅಮೃತಘಳಿಗೆ ಹೊಸ ಮೆಗಾ ಧಾರಾವಾಹಿ ಆರಂಭವಾಗಲಿದೆ.ಕಿರುತೆರೆಯ ಖ್ಯಾತ ನಿರ್ದೇಶಕ, ಬರಹಗಾರ ರವಿ ಆರ್ ಗರಣಿಯವರ ಸಾರಥ್ಯದಲ್ಲಿ ಈ ಧಾರಾವಾಹಿಯ ಕಥೆ ಮೂಡಿಬರುತಿದ್ದು, ಹೆಸರಾಂತ ನಿರ್ದೇಶಕರಾದ ಭಾರತೀಶ್ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಕಿರುತೆರೆಯ ಖ್ಯಾತ…

  • ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದೆ ಹೊಸಬರ “ವೇಷ” .

    ಹಂಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ರಾಘವೇಂದ್ರ ಡಿ.ಜಿ ನಿರ್ಮಿಸಿ ನಾಯಕನಟನಾಗಿ ಅಭಿನಯಿಸಿರುವ, ಕ್ರಷ್ಣ ನಾಡ್ಪಾಲ್ ನಿರ್ದೇಶನದ “ವೇಷ” ಚಿತ್ರದ ಟ್ರೇಲರ್ ಇತ್ತೀಚೆಗೆ A2 ಮ್ಯೂಸಿಕ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ‌, ಮರಿಟೈಗರ್ ವಿನೋದ್ ಪ್ರಭಾಕರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್ ಹಾಗೂ ಸಂಭಾಷಣೆಕಾರ ಮಾಸ್ತಿ “ವೇಷ” ಚಿತ್ರದ ಟ್ರೇಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರತಂಡದ ಸದಸ್ಯರು “ವೇಷ”ದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು. ಜೀವನದಲ್ಲಿ ಎಲ್ಲರೂ ಒಂದಲ್ಲಾ ಒಂದು ರೀತಿ ”…

  • ಈ ವಾರ ತೆರೆಗೆ “ಕ್ಯಾಲೆಂಡರ್

    ಈ ಹಿಂದೆ “ಸ್ವಾರ್ಥ ರತ್ನ” ಸೇರಿದಂತೆ ಎರಡು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದ ಆದರ್ಶ ಗುಂಡುರಾಜ್ ಅಭಿನಯದ “ಕ್ಯಾಲೆಂಡರ್” ಚಿತ್ರ ಈ ವಾರ ಏಪ್ರಿಲ್ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮಹಿಳಾ ಪ್ರಧಾನ ಈ ಚಿತ್ರ ಈಗಾಗಲೇ ಟ್ರೇಲರ್ ಹಾಗೂ ಹಾಡುಗಳ ಮೂಲಕ ಜನಪ್ರಿಯವಾಗಿದೆ. ಆದರ್ಶ ಗುಂಡುರಾಜ್ ಅವರೆ ನಿರ್ಮಿಸಿ ನಾಯಕನಾಗೂ ನಟಿಸಿರುವ ಈ ಚಿತ್ರದ ನಾಯಕಿಯರಾಗಿ ನಿವಿಷ್ಕ ಪಾಟೀಲ್ ಹಾಗೂ ಸುಶ್ಮಿತ ನಟಿಸಿದ್ದಾರೆ.ಕನಸಿನ ರಾಣಿ ಮಾಲಾಶ್ರೀ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಮೇಶ್ ಇಂದಿರಾ, ಪ್ರಮೋದ್ ಶೆಟ್ಟಿ,…

  • “ಅಪ್ಪು ಕಪ್ ಸೀಸನ್ 4” ಗೆ ಅದ್ದೂರಿ ಚಾಲನೆ*

    ಚೇತನ್ ಸೂರ್ಯ ಅವರ STELLER STUDIO & EVENT MANAGEMENT ಸಂಸ್ಥೆ, PRK Audio ಸಂಸ್ಥೆಯ ಸಹಯೋಗದೊಂದಿಗೆ“ಅಪ್ಪು ಕಪ್”(ಶಟಲ್ ಬ್ಯಾಡ್ಮಿಂಟನ್ ಟೂರ್ನಿ) ಮೂರು ಸೀಸನ್ ಅದ್ದೂರಿಯಾಗಿ ನಡೆದಿದೆ. ಇದೇ ಜುಲೈ 24, 25, 26 ರಂದು ಲೀಗ್ ಪಂದ್ಯಗಳು ನಡೆಯಲಿದೆ. ” ಇತ್ತೀಚೆಗೆ “ಅಪ್ಪು ಕಪ್ ಸೀಸನ್ 4” ಉದ್ಘಾಟನೆ ಹಾಗೂ ಟೀಮ್ ಆಕ್ಷನ್ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ಕೆ.ವಿ.ಪ್ರಭಾಕರ್, ವಿಧಾನ ಪರಿಷತ್ ಸದಸ್ಯರು ಹಾಗೂ ಸಾಯಿಗೋಲ್ಡ್ ಪ್ಯಾಲೆಸ್ ಮಾಲೀಕರಾದ…

  • “ಅನ್ ಲಾಕ್ ರಾಘವ” ಚಿತ್ರ ತಂಡದಿಂದ ಮತ್ತೊಂದು ಸಿಹಿ ಸುದ್ದಿ .!!

    “ಮೂಡ್ಸ್ ಆಫ್ ರಾಘವ” ಟೀಸರ್ ಬಿಡುಗಡೆ . ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ ಚಿತ್ರಗಳಲ್ಲಿ “ಅನ್ ಲಾಕ್ ರಾಘವ” ಕೂಡ ಒಂದು. ಚಿತ್ರ ಸೆಟ್ಟೇರಿದ ದಿನದಿಂದಲೂ ಹಲವಾರು ವಿಶೇಷತೆಗಳಿಂದ ಎಲ್ಲರ ಗಮನ ಸೆಳೆಯುತ್ತಿದೆ.ಇದೀಗ ಚಿತ್ರತಂಡ ಸಿನಿಪ್ರೇಕ್ಷಕರಿಗೆ ಮತ್ತೊಂದು ಸಿಹಿ ಸುದ್ದಿ ಬಂದಿದೆ. ಅದೇ ‘ಮೂಡ್ಸ್ ಆಫ್ ರಾಘವ’ ಟೀಸರ್. ಇಂದು ಸಂಜೆ(ಅಕ್ಟೋಬರ್ 4) ಸರಿಯಾಗಿ 5.04 ಕ್ಕೆ A2 ಮ್ಯೂಸಿಕ್ ನಲ್ಲಿ ಬಿಡುಗಡೆಯಾಗಿದೆ . ಟೀಸರ್ ಬಿಡುಗಡೆಯಾದ ಕ್ಷಣದಿಂದಲೇ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಟೀಸರ್…

0 0 votes
Article Rating
Subscribe
Notify of
guest
0 Comments
Oldest
Newest Most Voted