ನಾಳೆ ನಮ್ಮ ಹುಬ್ಬಳ್ಳಿ ನಗರದಲ್ಲಿ ‘ಬೃಂದಾವಿಹಾರಿ’ ಚಿತ್ರದ ಪ್ರೀ-ರಿಲೀಸ್ ಇವೆಂಟ್
ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಹಾಗೂ ಚಂದನವನದ ಕಲಾವಿದರು ಭಾಗಿ..
ಹುಬ್ಬಳ್ಳಿ: ಕೆವಿಸಿ ಪ್ರೊಡಕ್ಷನ್ ಹಾಗೂ ವಿರಾಟ್ ಸಾಯಿ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ಗೋಲ್ಡನ್ ಮೆಗಾ ಸ್ಟಾರ್ ಗಣೇಶ ಅಭಿನಯದ ಬಹು ನಿರೀಕ್ಷಿತ ‘ಬೃಂದಾವಿಹಾರಿ’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ ನಾಳೆ (ಅಕ್ಟೋಬರ್ 10ರಂದು) ಸಂಜೆ 6 ಗಂಟೆಗೆ ನಗರದ ನೆಹರೂ ಮೈದಾನದಲ್ಲಿ ಇರಲಿದೆ. ಇದೇ ತಿಂಗಳು ಅ.16 ರಂದು ವಿಶ್ವಾದ್ಯಾಂತ ಸಿನಿಮಾ ತೆರೆ ಕಾಣಲಿದೆ. ಈಗಾಗಲೇ ಸಿನಿಮಾದ ಐದು ಹಾಡುಗಳು ಬಿಡುಗಡೆಯಾಗಿ ಹಿಟ್ ಆಗಿದ್ದು, ನಾಳೆ ನಡೆಯುವ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಚಿತ್ರದ ಒಂದು ಗೀತೆ ಕೂಡಾ ಬಿಡುಗಡೆ ಆಗಲಿದೆ. ದೇಶಾದ್ಯಂತ 1300 ಪರದೆ ಮೇಲೆ ಬಹು ನಿರೀಕ್ಷಿತ ಬೃಂದಾವಿಹಾರಿ ಸಿನಿಮಾ ತೆರೆ ಕಾಣಲಿದ್ದು, ಚಿತ್ರಕ್ಕೆ ಕಥೆ, ಚಿತ್ರಕಥೆ, ಬರೆದು ನಿರ್ದೇಶನ ಮಾಡಿದ್ದಾರೆ ಶ್ರೀನಿವಾಸ ರಾಜು ರವರು . ಸಿನಿಮಾದಲ್ಲಿ ಗಣೇಶ್, ದೇವಿಕಾ ಭಟ್, ಮಾಳವಿಕಾ ಶರ್ಮಾ, ರಂಗಾಯಣ ರಘು,ಸಾಧು ಕೋಕಿಲ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
ನಾಳಿನ ಕಾರ್ಯಕ್ರಮದಲ್ಲಿ ನಾಯಕ ನಟ ಗಣೇಶ, ನಾಯಕಿ ದೇವಿಕಾ ಭಟ್, ನಿರ್ದೇಶಕ ಶ್ರೀನಿವಾಸ ರಾಜು, ನಿರ್ಮಾಪಕ ಸಮೃದ್ಧಿ ಮಂಜುನಾಥ ಸೇರಿದಂತೆ ಇನ್ನೂ ಅನೇಕ ಕಲಾವಿದರಾದ ರಂಗಾಯಣ ರಘು, ಸಾಧು ಕೋಕಿಲಾ, ಗಿಲ್ಲಿ ನಟ, ಜಗ್ಗಪ್ಪ, ಮಂಜು ಪಾವಗಡ, ಕುರಿ ಪ್ರತಾಪ್ ಮುಂತಾದವರು ಹಾಜರಿರಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಮಹೇಶ್ ಟೆಂಗಿನಕಾಯಿ, ವೀರೇಂದ್ರ ಪಪ್ಪಿ, ರಾಜು ಗೌಡ ಹಾಗೂ ನಟ ಡಾರ್ಲಿಂಗ್ ಕೃಷ್ಣ ಆಗಮಿಸಲಿದ್ದಾರೆಂದು ಚಿತ್ರ ತಂಡ ತಿಳಿಸಿದೆ.
ಕಾರ್ಯಕ್ರಮದ ವಿಶೇಷತೆ
ನಟ ಗಣೇಶ್ ಹಾಗೂ ನಾಯಕಿ ದೇವಿಕಾ ಭಟ್ ಅವರು ‘ಬೃಂದಾವಿಹಾರಿ’ ಚಿತ್ರದ ಹಾಡಿಗೆ ನೃತ್ಯ ಮಾಡಲಿದ್ದಾರೆ. ಜೊತೆಗೆ ಬಿಗ್‌ಬಾಸ್ ಖ್ಯಾತಿಯ ಕಿಶನ್ ಹಾಗೂ ತಂಡದಿಂದ ನೃತ್ಯ ಮತ್ತು ಜಗ್ಗಪ್ಪ, ಮಂಜು ಪಾವಗಡ, ಗಿಲ್ಲಿ ನಟ ಸೇರಿದಂತೆ ‘ಕಾಮಿಡಿ ಕಿಲಾಡಿಗಳು’ ತಂಡದಿಂದ ಕಾಮಿಡಿ ಸ್ಕಿಟ್‌ಗಳು ನಡೆಯುತ್ತವೆ. ತಾವೆಲ್ಲರೂ ಕುಟುಂಬ ಸಮೇತ ಈ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೇಳಿ ಕೊಳ್ಳುತ್ತೇವೆ…
