ಡಾರ್ಲಿಂಗ್ ಕೃಷ್ಣ ಅಭಿನಯದ “ಶುಗರ್ ಫ್ಯಾಕ್ಟರಿ” ಟ್ರೇಲರ್ ಗೆ ಸಿನಿರಸಿಕರು ಫಿದಾ

ದೀಪಕ್ ಅರಸ್ ನಿರ್ದೇಶನದ ಬಹು ನಿರೀಕ್ಷಿತ ಈ ಚಿತ್ರ ನವೆಂಬರ್ 24 ರಂದು ತೆರೆಗೆ .

ಬಿಡುಗಡೆಗೂ ಮುನ್ನವೇ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ “ಶುಗರ್ ಫ್ಯಾಕ್ಟರಿ” ಚಿತ್ರ ಭಾರಿ ಸುದ್ದಿಯಲ್ಲಿದೆ. ಇತ್ತೀಚೆಗೆ ಆನಂದ್ ಆಡಿಯೋ ಮೂಲಕ ಬಿಡೆಗಡೆಯಾಗಿರುವ ಈ ಚಿತ್ರದ ಟ್ರೇಲರ್ ಕುತೂಹಲ ಮೂಡಿಸಿದೆ. ಚಿತ್ರ ನೋಡುವ ಕಾತುರವನ್ನು ಮತ್ತಷ್ಟು ಹೆಚ್ಚಿಸಿದೆ. ಟ್ರೇಲರ್ ನಲ್ಲಿ ಮನೋರಂಜನೆಯ ಮಹಾಪೂರವೇ ಹರಿದು ಬಂದಿದೆ. ಎರಡು ನಿಮಿಷಗಳ ಟ್ರೇಲರ್ ನಲ್ಲೇ ಇಷ್ಟು ಮನರಂಜನೆ ಹಾಗೂ ಹಾಸ್ಯಭರಿತ ಸಂಭಾಷಣೆಗಳಿದೆ. ಇನ್ನು ಇಡೀ ಚಿತ್ರದುದ್ದಕ್ಕೂ ನಾನ್ ಸ್ಟಾಪ್ ಮನರಂಜನೆ ಖಚಿತ ಎಂಬುದಕ್ಕೆ ಟ್ರೇಲರ್ ಮುನ್ನುಡಿಯಾಗಿದೆ . ಅಪಾರವೆಚ್ಚದಲ್ಲಿ ಹಾಗೂ ಅದ್ದೂರಿಯಾಗಿ ಮೂಡಿಬಂದಿರುವ “ಶುಗರ್ ಫ್ಯಾಕ್ಟರಿ” ನವೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಗಿರೀಶ್ ನಿರ್ಮಿಸಿರುವ, ದೀಪಕ್ ಅರಸ್ ನಿರ್ದೇಶಿಸಿರುವ “ಶುಗರ್ ಫ್ಯಾಕ್ಟರಿ” ಚಿತ್ರದ ಹಾಡಗಳು ಹಾಗೂ ಟ್ರೇಲರ್ ಈಗಾಗಲೇ ಜನಪ್ರಿಯವಾಗಿದೆ. ಡಾರ್ಲಿಂಗ್ ಕೃಷ್ಣ ಅವರ ಸಿನಿ ಜರ್ನಿಯಲ್ಲೇ “ಶುಗರ್ ಫ್ಯಾಕ್ಟರಿ” ಬಿಗ್ ಬಜೆಟ್ ನ ಚಿತ್ರವಾಗಿದೆ. ಸೋನಾಲ್ ಮಾಂತೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ ಕೃಷ್ಣ ಅವರಿಗೆ ನಾಯಕಿಯರಾಗಿ ನಟಿಸಿದ್ದಾರೆ.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments