“ನಾರೀ ಫಸ್ಟ್ “ನ ಪ್ರತಿಷ್ಟಿತ ‘ಜ್ಯುವೆಲ್ ಆಫ್ ಸೌತ್’ ಗೆ ಜ್ಯೂರಿಯಾಗಿ ಮಿಸ್ ಇಂಡಿಯಾ ಸಾರಾ ಜೊತೆ ಸುಧೀರ್ ಅತ್ತಾವರ್ ಆಯ್ಕೆ!
ಖ್ಯಾತ ಚಿತ್ರ ನಟಿ ಮತ್ತು ಭರತನಾಟ್ಯಕಲಾವಿದೆ ಸುಧಾ ಚಂದ್ರನ್ ಹಾಗೂ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2007 ಸಾರಾ ಜೆನ್ ಡಯಾಸ್ ಜೊತೆ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಹಾಗೂ “ಕೊರಗಜ್ಹ” ಚಿತ್ರ ನಿರ್ದೇಶಕ ಸುಧೀರ್ ಅತ್ತಾವರ್ ; ದಕ್ಷಿಣ ಭಾರತ ಮಟ್ಟದ ನಾರಿ ಫಸ್ಟ್- ಜ್ಯುವೆಲ್ ಆಫ್ ಸೌತ್ ಸ್ಪರ್ಧೆಗೆ ಜ್ಯೂರಿಯಾಗಿ ಆಯ್ಕೆ ಯಾಗಿರುತ್ತಾರೆ..
ಸೌಂದರ್ಯ, ಪ್ರತಿಭೆ ಮತ್ತು ಸಂಸ್ಕೃತಿಯನ್ನು ಆಚರಿಸುವ ಪ್ರತಿಷ್ಠಿತ ಕಾರ್ಯಕ್ರಮವಾದ “ನಾರಿಫಸ್ಟ್- ಜ್ಯುವೆಲ್ ಆಫ್ ಇಂಡಿಯಾ” ಬ್ಯೂಟಿ ಪೇಜಂಟ್” ತನ್ನ ವೈಭವ ಮತ್ತು ಔನ್ನತ್ಯದಿಂದ ಇಡೀ ದೇಶದ ಜನರನ್ನು ಈಗಾಗಲೇ ಆಕರ್ಷಿಸಿದೆ.ಬಾಲಿವುಡ್ ನ ಮಲೈಕಾ ಅರೋರ ಮೊದಲಾದ ಖ್ಯಾತ ನಾಮಾಂಕಿತರು ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿರುವರು.
ದೆಹಲಿಯ ಐಕ್ತಾ ಶರ್ಮಾ ಅವರ ಕಲ್ಪನೆಯ ಈ ಪೇಜಂಟ್ ದಕ್ಷಿಣ ಭಾರತದ ಆಂದ್ರ, ತೆಲಂಗಾಣ, ಕರ್ನಾಟಕ,ತಮಿಳುನಾಡು, ಕೇರಳ , ಪಾಂಡಿಚೇರಿ ಗಳನ್ನೊಳಗೊಂಡ ದಕ್ಷಿಣ ಭಾರತದ ರಾಜ್ಯಗಳಿಂದ 18 ವರ್ಷ ಮೇಲ್ಪಟ್ಟ ವಿವಾಹಿತ ಮತ್ತು ಅವಿವಾಹಿತ ಮಹಿಳೆಯರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು ! ಸೌಂದರ್ಯ ಮತ್ತು ಪ್ರತಿಭೆಯ ಸಾರದ ಜೊತೆಗೆ ಮಹಿಳಾ ಸಬಲೀಕರಣ ಮತ್ತು ಸಮಾನತೆಯನ್ನು ಈ ಮೆಗಾ ಇವೆಂಟ್ ಉತ್ತೇಜಿಸಲಿದೆ.

ಜ್ಯವೆಲ್ ಆಫ್ ಸೌತ್ ನ “ಕ್ವೀನ್”,”ಪ್ರಿನ್ಸೆಸ್” ಮತ್ತು “ಎಂಪ್ರೆಸ್” ಎಂಬ ಮೂರು ವಿಭಾಗಗಳಲ್ಲಿ ಸೆಪ್ಟಂಬರ್ 5ರಿಂದ 8 ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಈ ಕಾರ್ಯಾಕ್ರಮವನ್ನು ಅಂತಾರಾಷ್ಟ್ರೀಯ ಖ್ಯಾತಿಯ ನ್ರತ್ಯ ಪಟು ಸಂದೀಪ್ ಸೋಪರ್ಕರ್ ನಿರ್ದೇಶಿಸಿ ವಿನ್ಯಾಸಗೊಳಿಸಲಿರುವರು.
ಹಿಂದೆ “ಮಿಸ್ ಕೋಸ್ಟಲ್”, “ಮಿಸ್ ಯುನಿವರ್ಸಿಟಿ”, “ಫ್ಯಾಷನ್ ಪೇರೆಡ್” ಮೊದಲಾದ ಸೌಂದರ್ಯ ಸ್ಪರ್ಧೆಗಳನ್ನು ಆಯೋಜಿಸಿದ್ದ ಸುಧೀರ್ ಅತ್ತಾವರ್ ಹಿಂದಿನಿಂದಲೂ ಮಾಡೆಲಿಂಗ್ ಮತ್ತು ಬ್ಯೂಟಿ ಪೇಜೆಂಟ್ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದರು.
