ಜನವರಿ 3 ರಂದು “ಸಪ್ಲೆಯರ್ ಶಂಕರ” ಚಿತ್ರತಂಡದಿಂದ ಬಿಗ್ ಅನೌನ್ಸ್ ಮೆಂಟ್ .

ತ್ರಿನೇತ್ರ ಫಿಲಂಸ್ ಲಾಂಛನದಲ್ಲಿ ಎಂ ಚಂದ್ರಶೇಖರ್ & ಎಂ.ನಾಗೇಂದ್ರ ಸಿಂಗ್ ನಿರ್ಮಿಸಿರುವ ಹಾಗೂ ರಂಜಿತ್ ನಿರ್ದೇಶನದಲ್ಲಿ “ಗಂಟು ಮೂಟೆ” , “ಟಾಮ್ & ಜರ್ರಿ” ಖ್ಯಾತಿಯ ನಿಶ್ಚಿತ್ ಕರೋಡಿ ನಾಯಕನಾಗಿ ನಟಿಸಿರುವ “ಸಪ್ಲೆಯರ್ ಶಂಕರ” ಈಗಾಗಲೇ ಟೀಸರ್ ಮೂಲಕ ಸಾಕಷ್ಟು ಸದ್ದು ಮಾಡಿದೆ. ಜನವರಿ 3 ರಂದು ಚಿತ್ರತಂಡದಿಂದ ಬಿಗ್ ಅನೌನ್ಸ್ ಮೆಂಟ್ ಆಗಲಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ಮೂಲಕ ಚಿತ್ರದ ಕುರಿತಾದ ಮಹತ್ವದ ಸುದ್ದಿಯನ್ನು ತಿಳಿಸಲು ಚಿತ್ರತಂಡ ತಯಾರಿ ನಡೆಸಿದೆ. ಚಿತ್ರತಂಡದಿಂದ ಹೊರಬರುತ್ತಿರುವ ಮಹತ್ವದ ವಿಷಯ ಏನಿರಬಹುದು? ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted