ಡಿಪಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಡಿಪಿ ವೆಂಕಟೇಶ್ ನಿರ್ಮಾಣದ ಚಿತ್ರ RR77

ಇನ್ನು ಚಿತ್ರದ ಮುಖ್ಯ ಭೂಮಿಕೆಯಲ್ಲಿ ಡಾ. ರಾಜ್‌ವೀರ್ ಅಭಿನಯಿಸಲಿದ್ದಾರೆ ಚಿತ್ರದ ಶೀರ್ಷಿಕೆಯೊಂದಿಗೆ ಎಲ್ಲರ ಗಮನವನ್ನು ಸೆಳೆಯಲು ಯಾವ ಅನುಮಾನವೂ ಇಲ್ಲ ಎಂದು ಚಿತ್ರದ ನಿರ್ದೇಶಕ ಮಂಜು ಕವಿ ತಿಳಿಸಿದರು ಸಂಪೂರ್ಣ ಕಥೆಯನ್ನು ಕೇಳಿ ಡಿಪಿ ವೆಂಕಟೇಶ್ ರವರು ಕಥೆ ತುಂಬ ಮನಸ್ಸಿಗೆ ಹತ್ತಿರವಾಗಿದೆ ಇಂತಹ ಕಥೆಗಾಗಿ ಕಾಯುತ್ತಿದ್ದೆ ಕರ್ನಾಟಕದ ಜನತೆಗೆ ನಮ್ಮ ಸಿನಿಮಾ ಕೊಡುಗೆಯಾಗಲಿ ಎಂದು ತಿಳಿಸಿ ಬಂಡವಾಳ ಹೂಡಲಿದ್ದಾರೆ ಇನ್ನು ಚಿತ್ರದಲ್ಲಿ

ಹಾಡುಗಳಿದ್ದು ಎಲ್ಲರ ಗಮನ ಸೆಳೆಯುತ್ತದೆ ಎಂದು ಮಂಜು ಕವಿ ತಿಳಿಸಿದರು ನಿರ್ದೇಶನ ತಂಡದಲ್ಲಿ ಎಸ್ ಜೆ ಸಂಜಯ್ ದಯಾ ಗಿರೀಶ್ ಸಾಕಿ ಸಂಗೀತ ಶೆಟ್ಟಿ ಕಾರ್ಯನಿರ್ವಹಿಸಿದ್ದಾರೆ ಇನ್ನು ಛಾಯಾಗ್ರಹಣ ರಾಜಕಡುರ್ ಇನ್ನು ಚಿತ್ರದಲ್ಲಿ ಎನ್ ಟಿ ರಾಮಸ್ವಾಮಿಗೌಡ ತುಷಾರ್ ವಿನೋದ್ ಸನತ್ ಜಗದೀಶ್ ಕೊಪ್ಪ ಪವಿತ್ರ ಗೊಬ್ಬರಗಾಲ ಚಂದ್ರಪ್ರಭ ವಿಕ್ಟರಿ ಸಿಲ್ಲಿ ಲಲ್ಲಿ ಚಿದಾನಂದ ಇನ್ನು ಅನೇಕ ಹಿರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಧರಣಿ ಹಾಗೂ ನಿಕಿತ ಸ್ವಾಮಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಇನ್ನು ಚಿತ್ರಕ್ಕೆ ನಾಲ್ಕು ಹಾಡುಗಳು ಮಂಜು ಕವಿ ರಚಿಸಿ , ರಾಗ ಸಂಯೋಜನೆ ಮಾಡಿದ್ದಾರೆ ನಾಲ್ಕು ಹಾಡುಗಳಿಗೆ ಉತ್ತಮವಾದ ವಾದ್ಯ ಸಂಯೋಜನೆ ವಿಜಯ ಹರಿತ್ಸ. ವಿನು ಮನಸ್ಸು ನೀಡಿದ್ದಾರೆ ಚಿತ್ರಕಥೆಗೆ ಸೂಕ್ತವಾದ ಕಲಾವಿದ ಡಾ. ರಾಜ್ ವೀರ್ ಎಂದು ಮಂಜು ಕವಿ ಆಯ್ಕೆ ಮಾಡಿಕೊಂಡಿದ್ದಾರೆ ಸದ್ಯದಲ್ಲೇ ಚಿತ್ರೀಕರಣ ಶುರು ಮಾಡಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದಾರೆ ಚಿತ್ರಕ್ಕೆ ನೃತ್ಯ ಸಂಯೋಜನೆ ಜಗ್ಗು ಅವರು ಕಾರ್ಯನಿರ್ವಹಿಸಿದ್ದಾರೆ ಇನ್ನು ಚಿತ್ರದ ಮೊದಲನೇ ಪೋಸ್ಟರ್ ಲುಕ್ಕನ್ನು ರಂಭಾಪುರಿ ಶ್ರೀಗಳು ಬಿಡುಗಡೆ ಮಾಡಿ ಡಾ. ರಾಜ್ ವೀರ್ ರವರ ಮೊದಲನೆ ಲುಕ್ಕು ಬಹಳ ಸುಂದರವಾಗಿ ಕಾಣುತ್ತದೆ ಎಂದು ರಂಭಾಪುರಿ ಜಗದ್ಗುರುಗಳು ತಿಳಿಸಿ RR77 ಚಿತ್ರ ತಂಡಕ್ಕೆ ಶುಭ ಹಾರೈಸಿದರು

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments