“X&Y” ಚಿತ್ರದ “ಆಂಬು ಆಟೋ ” ಗೆ ಫಿದಾ ಆದ ಆಟೋ ಚಾಲಕರು

ರೀಲ್ಸ್ ಮೂಲಕ ಜನರಿಗೆ ಜಾಗೃತಿ .

ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿರುವ ಕನ್ನಡದ ಬಹು ನಿರೀಕ್ಷಿತ “X&Y” ಚಿತ್ರತಂಡ ಇತ್ತೀಚೆಗೆ ಆಟೋರಿಕ್ಷಾ “ಆಂಬು ಆಟೋ” ಎಂಬ ವಾಹನದ ಬಗ್ಗೆ ಮಾಹಿತಿ ನೀಡಿತ್ತು. ಇದನ್ನು ಚಿತ್ರದಲ್ಲಿ ಕಲಾವಿದನಂತೆ ಸಹ ನಿರ್ದೇಶಕ ಡಿ.ಸತ್ಯಪ್ರಕಾಶ್ ಬಳಸಿಕೊಂಡಿದ್ದಾರೆ. ಈಗಾಗಲೇ ಎಲ್ಲರ ಗಮನ ಸೆಳೆದಿರುವ “ಆಂಬು ಆಟೋ”ದಲ್ಲಿ ಆಂಬುಲೆನ್ಸ್ ನಲ್ಲಿರುವoತೆ ಎಲ್ಲ ಸೌಲಭ್ಯಗಳಿದೆ. ಆಟೋದಲ್ಲೂ ಇಷ್ಟು ಸೌಲಭ್ಯಗಳನ್ನು ಅಳವಡಿಸಬಹುದು ಎಂಬುದನ್ನು ” ರಾಮಾ ರಾಮಾ ರೆ” ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್ ತೋರಿಸಿಕೊಟ್ಟಿದ್ದಾರೆ.
“ಆಂಬು ಆಟೋ” ಗೆ ಆಟೋ ಚಾಲಕರು ಫಿದಾ ಆಗಿದ್ದಾರೆ. ಆಟೋ ಚಾಲಕ ಟಗರು ಶಿವ ಅವರ ಸಾರಥ್ಯದಲ್ಲಿ ಅನೇಕ ಆಟೋ ಚಾಲಕರು ರೀಲ್ಸ್ ಮಾಡುವ ಮೂಲಕ ಇದರ ಉಪಯೋಗವನ್ನು ಜನರಿಗೆ ತಿಳಿಸುತ್ತಿದ್ದಾರೆ. ಆಟೋ ಚಾಲಕರ ಪ್ರೋತ್ಸಾಹಕ್ಕೆ ಚಿತ್ರತಂಡ ಸಹ ಧನ್ಯವಾದ ತಿಳಿಸಿದೆ. ಸತ್ಯ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

Similar Posts

4 1 vote
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments