‘ಗಣಪತ್’ ಚಿತ್ರದ ಟ್ರೇಲರ್ ಬಿಡುಗಡೆ!
ಟೈಗರ್ ಶ್ರಾಫ್ ಅಭಿಮಾನಿಗಳು ಬಹಳ ಕುತೂಹಲದಿಂದ ಕಾಯುತ್ತಿರುವ ಬಹುನೀಕ್ಷಿತ ಪ್ಯಾನ್ ಇಂಡಿಯಾ ಚಿತ್ರವಾದ ‘ಗಣಪತ್’ನ ಟ್ರೇಲರ್ ಬಿಡುಗಡೆಯಾಗಿದೆ. ಟೈಗರ್ ಶ್ರಾಫ್‍ನ ಹೊಸ ಅವತಾರ, ಕೃತಿ ಸನಾನ್ ಅವರ ಸಾಹಸ ಮತ್ತು ಅಮಿತಾಭ್ ಬಚ್ಚನ್ ಅವರ ಉಪಸ್ಥಿತಿ … ಇವೆಲ್ಲವೂ ಚಿತ್ರದ ಮೇಲಿರುವ ಕುತೂಹಲವನ್ನು ಇನ್ನಷ್ಟು ಹೆಚ್ಚಾಗಿಸಿದೆ.
ಇದುವರೆಗೂ ಹತ್ತು ಹಲವು ಜನಪ್ರಿಯ ಮತ್ತು ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಬಾಲಿವುಡ್‍ನ ಖ್ಯಾತ ನಿರ್ಮಾಣ ಸಂಸ್ಥೆಯಾದ ಪೂಜಾ ಎಂಟರ್‍ಟೈನ್‍ಮೆಂಟ್, ಇದೀಗ ‘ಗಣಪತ್’ ಚಿತ್ರದ ಮೂಲಕ ನಿರ್ಮಾಣ ಮೌಲ್ಯಗಳನ್ನು ಇನ್ನಷ್ಟು ಹೆಚ್ಚಿಸಿದೆ. ಹೊಸ ತಲೆಮಾರಿನ ಪ್ರೇಕ್ಷಕರಿಗೆ ಈ ಸಿನಿಮಾ ಮೂಲಕ ಹೊಸ ಸಿನಿಮಾ ಅನುಭವ ನೀಡುವುದಕ್ಕೆ ಸಜ್ಜಾಗಿದೆ.
‘ಗಣಪತ್’ ಚಿತ್ರವು ಅ.20ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದ್ದು, ಈಗ ಟ್ರೇಲರ್ ಎಲ್ಲರ ಗಮನ ಸೆಳೆದಿದೆ. ಟ್ರೇಲರ್ ನೋಡಿ ಪ್ರೇಕ್ಷಕರು ಚಿತ್ರಕ್ಕಾಗಿ ಕುತೂಹಲದಿಂದ ಕಾಯುವಂತಾಗಿದೆ. ಈ ಟ್ರೇಲರ್‍ನಲ್ಲಿ ಕಣ್ಸೆಳೆಯುವ ದೃಶ್ಯಗಳ ಜೊತೆಗೆ ಅದ್ಭುತ ತಾರಾಗಣವಿದೆ. ಈ ಚಿತ್ರವು ಪ್ರೇಕ್ಷಕರನ್ನು ಇದುವರೆಗೂ ಕಂಡುಕೇಳರಿಯದ ಹೊಸ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ.
‘ಗಣಪತ್’ ಚಿತ್ರದ ಒಂದು ವಿಶೇಷತೆಯೆಂದರೆ, ಇದೊಂದು ಭವಿಷ್ಯದ ಚಿತ್ರವಾಗಿರುವುದು. ಚಿತ್ರದಲ್ಲಿ ಗ್ರಾಫಿಕ್ಸ್ ಕೆಲಸಗಳು ಹೆಚ್ಚಾಗಿದ್ದು, ಜಗತ್ತಿನಾದ್ಯಂತ ಇರುವ ನುರಿತ ಗ್ರಾಫಿಕ್ಸ್ ತಜ್ಞರು ಈ ಚಿತ್ರಕ್ಕೆ ಅಂತಾರಾಷ್ಟ್ರೀಯ ಸ್ಪರ್ಶ ಕೊಟ್ಟಿದ್ದಾರೆ. ಇದುವರೆಗೂ ಯಾವುದೇ ಭಾರತೀಯ ಚಿತ್ರದಲ್ಲೂ ಕಂಡರಿಯದ ವಿಎಫ್‍ಎಕ್ಸ್ ಕೆಲಸ ಈ ಚಿತ್ರದಲ್ಲಿ ನೋಡಬಹುದಾಗಿದ್ದು, ಈ ನಿಟ್ಟಿನಲ್ಲಿ ‘ಗಣಪತ್’, ಭಾರತೀಯ ಚಿತ್ರರಂಗದಲ್ಲಿ ಹೊಸದೊಂದು ಮಾದರಿಯಾಗಿರಲಿದೆ. ಈ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಸಿನಿಮಾ ಅನುಭವ ನೀಡುವ ಪ್ರಯತ್ನವನ್ನು ಮಾಡಲಾಗಿದೆ ಎಂದು ನಿರ್ಮಾಪಕರಲ್ಲೊಬ್ಬರಾದ ಜಾಕಿ ಭಗ್ನಾನಿ ಅವರ ಅನಿಸಿಕೆ.
ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘’ಗಣಪತ್’ ಚಿತ್ರದ ಹಾಡು ಮತ್ತು ಟೀಸರ್‍ಗೆ ಸಿಕ್ಕ ಅದ್ಭುತ ಪ್ರತಿಕ್ರಿಯೆ ನೋಡಿ ಹೃದಯ ತುಂಬಿ ಬಂದಿದೆ. ನಮ್ಮ ಕಲ್ಪನೆಯು ಪ್ರೇಕ್ಷಕರಿಗೂ ಇಷ್ಟವಾಗಿರುವುದನ್ನು ನೋಡಿ ಖುಷಿಯಾಗಿದೆ. ಟ್ರೇಲರ್‍ಗೂ ಅದೇ ಮಟ್ಟದ ಪ್ರೀತಿ ಹಾಗೂ ಮೆಚ್ಚುಗೆ ಸಿಗುತ್ತದೆ ಎಂಬ ನಂಬಿಕೆ ನನಗಿದೆ. ಚಿತ್ರದಲ್ಲಿ ಇನ್ನೂ ಸಾಕಷ್ಟು ವಿಷಯಗಳಿದ್ದು, ಮುಂದಿನ ದಿನಗಳಲ್ಲಿ ಒಂದರಹಿಂದೊಂದು ವಿಷಯವನ್ನು ಬಹಿರಂಗಪಡಿಸಲಾಗುವುದು’ ಎಂದು ಅವರು ಹೇಳಿದ್ದಾರೆ.
ಪೂಜಾ ಎಂಟರ್‍ಪ್ರೈಸಸ್ ಅರ್ಪಿಸುತ್ತಿರುವ ‘ಗಣಪತ್: ಎ ಹೀರೋ ಈಸ್ ಬಾರ್ನ್’ ಚಿತ್ರವನ್ನು ವಾಶು ಭಗ್ನಾನಿ, ಜಾಕಿ ಭಗ್ನಾನಿ, ದೀಪ್ಶಿಕಾ ದೇಶ್ಮುಖ್ ಮತ್ತು ವಿಕಾಸ್ ಬಹ್ಲ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ವಿಕಾಸ್ ಬಹ್ಲ್ ನಿರ್ದೇಶಿಸುತ್ತಿರುವ ೀ ಚಿತ್ರ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ಅ.20ರಂದು ಬಿಡುಗಡೆಯಾಗುತ್ತಿದೆ.