‘ಜಾಂಬಿ ರೆಡ್ಡಿ 2 NXT LVL’: ತೇಜ ಸಜ್ಜಾ, ಪ್ರಶಾಂತ್ ವರ್ಮಾ ಕಾಂಬಿನೇಷನ್ನ ಹೊಸ ಚಿತ್ರದ ಟೈಟಲ್ ಗ್ಲಿಂಪ್ಸ್ ಬಿಡುಗಡೆ!
‘ಹನು-ಮಾನ್’ ಮತ್ತು ‘ಮಿರಾಯ್’ ಚಿತ್ರಗಳ ಮೂಲಕ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ಯಂಗ್ ಸೂಪರ್ ಹೀರೋ ತೇಜ ಸಜ್ಜಾ ಅಭಿನಯದ, ‘ಜಾಂಬಿ ರೆಡ್ಡಿ’ ಸೀಕ್ವೆಲ್ನ ಅಧಿಕೃತ ಶೀರ್ಷಿಕೆ ಬಿಡುಗಡೆಯಾಗಿದೆ. ತೇಜ ಸಜ್ಜಾ ಅವರ ಜನ್ಮದಿನದ ಅಂಗವಾಗಿ ‘ಜಾಂಬಿ ರೆಡ್ಡಿ 2 NXT LVL – ಡೆಡ್ ಆರ್ ಅಲೈವ್’ ಶೀರ್ಷಿಕೆ ಅನಾವರಣಗೊಳಿಸಲಾಗಿದೆ. ತೆಲುಗು ಚಿತ್ರರಂಗಕ್ಕೆ ಜಾಂಬಿ ಶೈಲಿಯನ್ನು ಪರಿಚಯಿಸಿದ ನಿರ್ದೇಶಕ ಪ್ರಶಾಂತ್ ವರ್ಮಾ ಈ ಬಾರಿ ‘ಕ್ರಿಯೇಟರ್’ ಆಗಿ ಕಾರ್ಯನಿರ್ವಹಿಸುತ್ತಿದ್ದು, ‘ದಿ ಫ್ಯಾಮಿಲಿ ಮ್ಯಾನ್ 2’ ಹಾಗೂ…
