‘ಖಲೀಫಾ’ ಟ್ರೈಲರ್ಗೆ ಭರ್ಜರಿ ಪ್ರತಿಕ್ರಿಯೆ: ಪೃಥ್ವಿರಾಜ್ ಸುಕುಮಾರನ್ ಅಭಿನಯದ ಚಿತ್ರ ಆಗಸ್ಟ್ 20ರಂದು ತೆರೆಗೆಕರ್ನಾಟಕದಲ್ಲಿ VK Films ವಿತರಣೆ!
ಬಹುನಿರೀಕ್ಷಿತ ಮಲಯಾಳಂ ಚಿತ್ರ ‘ಖಲೀಫಾ’ದ ಟ್ರೈಲರ್ ಆಗಸ್ಟ್ 16ರಂದು ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಪೃಥ್ವಿರಾಜ್ ಸುಕುಮಾರನ್ ಅವರ ಪವರ್ಫುಲ್ ಸ್ಕ್ರೀನ್ ಪ್ರೆಸೆನ್ಸ್, ಹೈ-ವೋಲ್ಟೇಜ್ ಆ್ಯಕ್ಷನ್ ಹಾಗೂ ಚಿತ್ರದ ಅದ್ಧೂರಿ ಮೇಕಿಂಗ್ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಖಲೀಫಾ’ ಒಂದು ಹೈ-ಆ್ಯಕ್ಷನ್ ಥ್ರಿಲ್ಲರ್ ಆಗಿದ್ದು, ಶಕ್ತಿ, ಪ್ರತೀಕಾರ ಮತ್ತು ಸಂಘರ್ಷದ ಸುತ್ತ ಕಥೆ ಸಾಗಲಿದೆ. ಟ್ರೈಲರ್ನಲ್ಲಿ ಕಾಣಿಸಿಕೊಂಡಿರುವ ಭರ್ಜರಿ ಆ್ಯಕ್ಷನ್ ದೃಶ್ಯಗಳು, ತೀವ್ರ ಮುಖಾಮುಖಿಗಳು ಹಾಗೂ…
