ರಿಷಿ ಅಭಿನಯದ “ರುದ್ರ ಗರುಡ ಪುರಾಣ” ಚಿತ್ರದ ಚಿತ್ರೀಕರಣ ಪೂರ್ಣ .
ಅಶ್ವಿನಿ ಆರ್ಟ್ಸ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ, ಕನ್ನಡದ ನ್ಯಾಚುರಲ್ ಸ್ಟಾರ್ ಎಂದೇ ಖ್ಯಾತಿಯಾಗಿರುವ ರಿಷಿ ನಾಯಕರಾಗಿ ಅಭಿನಯಿಸಿರುವ “ರುದ್ರ ಗರುಡ ಪುರಾಣ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಕ್ಲೈಮ್ಯಾಕ್ಸ್ ಫೈಟ್ ಅನ್ನು ಹೆಚ್ ಎಂ ಟಿ ಫ್ಯಾಕ್ಟರಿಯಲ್ಲಿ ಆರು ದಿನಗಳ ಕಾಲ ಚಿತ್ರಿಸಿಕೊಳ್ಳುವುದರೊಂದಿಗೆ ಈ ಚಿತ್ರದ ಚಿತ್ರೀಕರಣವನ್ನು ಇತ್ತೀಚಿಗೆ ಪೂರ್ಣಗೊಳಿಸಿ ಕುಂಬಳಕಾಯಿ ಒಡೆಯಲಾಯಿತು. ಚಿತ್ರಕ್ಕೆ ಒಟ್ಟು 70 ದಿನಗಳ ಚಿತ್ರೀಕರಣ ನಡೆದಿದೆ. “ಕವಲು ದಾರಿ” ಚಿತ್ರದಲ್ಲಿ ಟ್ರಾಫಿಕ್ ಪೊಲೀಸ್ ಕೆಲಸದಿಂದ ಕ್ರೈಂ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡಲು…