“ನಗುವಿನ ಹೂಗಳ ಮೇಲೆ” ಸುಂದರ ಪ್ರೇಮ ಪಯಣ.. ಟ್ರೇಲರ್ ನಲ್ಲೇ ಮೋಡಿ ಮಾಡಿದೆ ಅಭಿದಾಸ್ & ಶರಣ್ಯ ಶೆಟ್ಟಿ ಅಭಿನಯದ ಈ ಚಿತ್ರ .”ನಗುವಿನ ಹೂಗಳ ಮೇಲೆ” ಸುಂದರ ಪ್ರೇಮ ಪಯಣ..
ಶ್ರೀಸತ್ಯಸಾಯಿ ಆರ್ಟ್ಸ್ ಲಾಂಛನದಲ್ಲಿ ಕೆ.ಕೆ ರಾಧಾಮೋಹನ್ ನಿರ್ಮಿಸಿರುವ, “ಕೆಂಪಿರ್ವೆ” ಖ್ಯಾತಿಯ ವೆಂಕಟ್ ಭಾರದ್ವಾಜ್ ನಿರ್ದೇಶನದ ಹಾಗೂ ಅಭಿ ದಾಸ್ – ಶರಣ್ಯ ಶೆಟ್ಟಿ ಜೋಡಿಯಾಗಿ ನಟಿಸಿರುವ “ನಗುವಿನ ಹೂಗಳ ಮೇಲೆ” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಗಿದೆ. ಟ್ರೇಲರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈಗಾಗಲೇ ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಮನೆಮಾತಾಗಿರುವ ಈ “ಕನ್ನಡ ಮಣ್ಣಿನ ನಿಜ ಪ್ರೇಮ ಕಥೆ” ಫೆಬ್ರವರಿ 9 ರಂದು ತೆರೆಗೆ ಬರುತ್ತಿದೆ. ನಿರ್ದೇಶಕ ವೆಂಕಟ್…