ಮಲಯಾಳಂನ “ಎಆರ್‌ಎಂ” ಸಿನಿಮಾದ ವಿತರಣೆ ಹಕ್ಕು ಪಡೆದ ಹೊಂಬಾಳೆ; ಸೆಪ್ಟೆಂಬರ್‌ 12ರಂದು ಪ್ಯಾನ್‌ ಇಂಡಿಯಾ ಚಿತ್ರ ಬಿಡುಗಡೆ.

ಮಲಯಾಳಂನ “ಎಆರ್‌ಎಂ” ಸಿನಿಮಾದ ವಿತರಣೆ ಹಕ್ಕು ಪಡೆದ ಹೊಂಬಾಳೆ; ಸೆಪ್ಟೆಂಬರ್‌ 12ರಂದು ಪ್ಯಾನ್‌ ಇಂಡಿಯಾ ಚಿತ್ರ ಬಿಡುಗಡೆ.

ಮಲಯಾಳಂನ ಖ್ಯಾತ ನಟ ಟೊವಿನೋ ಥಾಮಸ್‌ ನಾಯಕನಾಗಿ ನಟಿಸಿರುವ “ಎಆರ್‌ಎಂ” ಸಿನಿಮಾ ಇದೀಗ ಬಿಡುಗಡೆಯ ಸನಿಹ ಬಂದಿದೆ. ಇದೇ ಸೆಪ್ಟೆಂಬರ್‌ 12ರಂದು ಈ ಸಿನಿಮಾ ತೆರೆಗೆ ಬರಲಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಶೆರಟನ್ ಹೊಟೇಲ್‌ನಲ್ಲಿ 3D ಫ್ಯಾಂಟಸಿ ಶೈಲಿಯ ARM ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಇನ್ನೇನು ಶೀಘ್ರದಲ್ಲಿಯೇ ತೆರೆ ಮೇಲೆ ಈ ಸಿನಿಮಾ ರಿಲೀಸ್‌ ಆಗಲಿದೆ. ವಿಶೇಷ ಏನೆಂದರೆ, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ಈ ಸಿನಿಮಾವನ್ನು ಕನ್ನಡದಲ್ಲಿ ಹೊಂಬಾಳೆ ಫಿಲಂಸ್‌ ಬಿಡುಗಡೆ ಮಾಡಲಿದೆ. ಮ್ಯಾಜಿಕ್ ಫ್ರೇಮ್ಸ್…