ಸಮ್ಮರ್ ಹಾಲಿಡೇಸ್ ಗೆ ಮನೋರಂಜನೆಯ ರಸದೌತಣ ನೀಡಲು ಬರುತ್ತಿದೆ “ಗನ್ಸ್ ಅಂಡ್ ರೋಸಸ್” .
ಹೆಚ್ ಆರ್ ನಟರಾಜ್ ನಿರ್ಮಾಣದ, ಹೆಚ್ ಎಸ್ ಶ್ರೀನಿವಾಸಕುಮಾರ್ ನಿರ್ದೇಶನದಲ್ಲಿ ಅರ್ಜುನ್ ನಾಯಕರಾಗಿ ನಟಿಸಿರುವ “ಗನ್ಸ್ ಅಂಡ್” ರೋಸಸ್ ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಇತ್ತೀಚೆಗೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಚಿತ್ರದ ಕುರಿತು ಸೆನ್ಸಾರ್ ಮಂಡಳಿ ಮೆಚ್ಚುಗೆ ಮಾತುಗಳಾಡಿದೆ. ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳ ಸೆನ್ಸಾರ್ ಕೂಡ ಇದೇ ತಿಂಗಳಲ್ಲಿ ಆಗಲಿದೆ. ಏಪ್ರಿಲ್ ನಲ್ಲಿ ಬೇಸಿಗೆ ರಜೆ ಆರಂಭವಾಗಲಿದ್ದು, ಆ ಸಮಯದಲ್ಲಿ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ…