ರೊಮ್ಯಾಂಟಿಕ್‌ ಕಾಮಿಡಿ ದಿ ರಾಜಾಸಾಬ್ ಚಿತ್ರದ ಝಲಕ್‌ ಮೂಲಕ ಆಗಮಿಸಿದ ಪ್ರಭಾಸ್‌.

ರೊಮ್ಯಾಂಟಿಕ್‌ ಕಾಮಿಡಿ ದಿ ರಾಜಾಸಾಬ್ ಚಿತ್ರದ ಝಲಕ್‌ ಮೂಲಕ ಆಗಮಿಸಿದ ಪ್ರಭಾಸ್‌.

ಗೆಲುವಿನ ಲಯಕ್ಕೆ ಮರಳಿರುವ ಟಾಲಿವುಡ್‌ ನಟ, ರೆಬೆಲ್‌ ಸ್ಟಾರ್‌ ಪ್ರಭಾಸ್‌, ಇದೀಗ ತಮ್ಮ ಮುಂದಿನ ಸಿನಿಮಾದ ಬಗ್ಗೆ ಸಣ್ಣ ಗ್ಲಿಂಪ್ಸ್‌ ಮೂಲಕ ಮತ್ತೆ ಫ್ಯಾನ್ಸ್‌ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಮಾಸ್‌ ಆಕ್ಷನ್‌ ಶೈಲಿಯ ಸಲಾರ್‌, ಕಲ್ಕಿ ಎಡಿ 2898 ಚಿತ್ರಗಳ ಯಶಸ್ಸಿನ ಬಳಿಕ ಇದೀಗ ಲವರ್‌ ಬಾಯ್‌ ಅವತಾರದಲ್ಲಿ ಎದುರಾಗಿದ್ದಾರೆ. ಆ ಪ್ಯಾನ್‌ ಇಂಡಿಯಾ ಚಿತ್ರವೇ “ದಿ ರಾಜಾಸಾಬ್”. ಸೋಮವಾರ ಈ ಚಿತ್ರದ ಸಣ್ಣ ಝಲಕ್‌ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಕಿರು ಗ್ಲಿಂಪ್ಸ್‌‌ನಲ್ಲಿ ಪ್ರಭಾಸ್‌ ಅವರ ಡ್ಯಾಶಿಂಗ್‌ ಲುಕ್‌…