ಪ್ರೀತಂ ಗುಬ್ಬಿ ನಿರ್ದೇಶನದ ಹಾಗೂ ಇಶಾ ಲಂಕೇಶ್ ನಾಯಕಿಯಾಗಿ ನಟಿಸುತ್ತಿರುವ ಹೊಸ ಚಿತ್ರಕ್ಕೆ “ಫಿಸಿಕ್ಸ್ ಟೀಚರ್” ಸುಮುಖ ನಾಯಕ. .
ಸದಭಿರುಚಿಯ ಚಿತ್ರಗಳ ನಿರ್ದೇಶಕ ಪ್ರೀತಂ ಗುಬ್ಬಿ ನಿರ್ದೇಶಿಸುತ್ತಿರುವ ನೂತನ ಚಿತ್ರದ ನಾಯಕಿಯಾಗಿ ಹೆಸರಾಂತ ಲೇಖಕ, ಪತ್ರಕರ್ತ ಪಿ.ಲಂಕೇಶ್ ಮೊಮ್ಮಗಳು, ನಿರ್ದೇಶಕಿ ಕವಿತಾ ಲಂಕೇಶ್ ಪುತ್ರಿ ಇಶಾ ಲಂಕೇಶ್ ನಟಿಸುತ್ತಿರುವ ಮಾಹಿತಿ ಇತ್ತೀಚೆಗಷ್ಟೇ ಚಿತ್ರತಂಡ ನೀಡಿತ್ತು. ಇದು ಇಶಾ ಅವರ ಅಭಿನಯದ ಚೊಚ್ಚಲ ಚಿತ್ರ ಕೂಡ. ನಾಯಕಿಯ ಹೆಸರನ್ನು ತಿಳಿಸಿದ ಚಿತ್ರತಂಡ ನಾಯಕನ ಹೆಸರನ್ನು ಬಹಿರಂಗ ಪಡಿಸಿರಲಿಲ್ಲ. ಈ ಚಿತ್ರದ ನಾಯಕ ಯಾರು? ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. “ಫಿಸಿಕ್ಸ್ ಟೀಚರ್”…
