“ಮೆಸ್ಸಿ” ಎಐ ಹಾಡು ಕ್ರಿಯೇಟ್ ಮಾಡಿದ ತಂಡದಿಂದ “ಕೊರಗಜ್ಜ” ಚಿತ್ರದ ಶ್ರೇಯ ಘೋಷಾಲ್ ಹಾಡು
ಸುಧೀರ್ ಅತ್ತಾವರ್ ನಿರ್ದೇಶನದ,ಶ್ರೇಯ ಘೋಷಾಲ್ ಹಾಡಿರುವ “ಕೊರಗಜ್ಜ” ಚಿತ್ರದಎರಡನೆಯ ಹಾಡು ಇನ್ನೇನು ಬಿಡುಗಡೆಯ ಆಗುತ್ತಿದೆ ಎನ್ನುವಾಗ ಚಿತ್ರತಂಡ ಮತ್ತೊಂದು ಸೀಕ್ರೆಟ್ ಹೊರಹಾಕಿದೆ. ಅಂತಾರಾಷ್ಟ್ರೀಯ ಫುಟ್ ಬಾಲ್ ತಾರೆ ಅರ್ಜಂಟೈನ್ ನ “ಲಿಯೊನಲ್ ಮೆಸ್ಸಿ” ಯ ಇತ್ತೀಚಿನ ಭಾರತ ಭೇಟಿಯ ಪ್ರಯಕ್ತ ವಿನ್ಯಾಸಗೊಳಿಸಿದ್ದ“ಮೈದಾನಂ ಮೀದಾ…ಒಕ್ಕ ವೀರುಡು…” ಎಐ ಹಾಡಿನ ಹಿಂದಿನ ಕರ್ಮಚಾರಿಗಳು ಮತ್ತು ಕ್ರಿಯೇಟಿವ್ ರೂವಾರಿಗಳೇ “ಕೊರಗಜ್ಜ” ಚಿತ್ರದ ಶ್ರೇಯ ಘೋಷಾಲ್ – ಅರ್ಮನ್ ಮಲಿಕ್ ಹಾಡಿದ್ದ ಹಾಡನ್ನು ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್’ ತಂತ್ರಜ್ಞಾನದಿಂದ ವಿನೂತನವಾಗಿ ವಿನ್ಯಾಸಗೊಳಿಸಿದೆ. ಸುಧೀರ್ ಅತ್ತಾವರ್…
