ಒಂದು ಸಿನಿಮಾಗೆ ನಾಯಕ ಎಷ್ಟು ಮುಖ್ಯವೋ PRO ಕೂಡ ಅಷ್ಟೇ ಮುಖ್ಯ | ಸುಧೀಂದ್ರ ವೆಂಕಟೇಶ್
ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ತೊಡಗಿಕೊಂಡವರಿಗೆ ಹಾಗೂ ಸಿನಿಮಾಸಕ್ತರಿಗಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಏರ್ಪಡಿಸಿದ್ದ 3 ದಿನಗಳ ‘ಸಿನಿ ಸಂವಾದ’ ಕಾರ್ಯಕ್ರಮದ ಕೊನೆಯ ದಿನದ ಕೊನೆಯ ಗೋಷ್ಠಿಯಾಗಿ ಸಿನಿಮಾ ಪ್ರಚಾರಕರ್ತರು ಹಾಗೂ ಪ್ರಚಾರ ವಿನ್ಯಾಸಕರು ತಾವು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚೆ ನಡೆಸಿದರು. ಚಿತ್ರರಂಗದಲ್ಲಿ ಪ್ರಚಾರಕರ್ತರ ಪಾತ್ರ, ಸಿನಿಮಾ ಪ್ರಚಾರದ ಮಹತ್ವದ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ಇಡೀ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿಯನ್ನು ಪತ್ರಕರ್ತ ಚಿದಾನಂದ ಪಟೇಲ್ ಅವರು ನಿರ್ವಹಿಸಿದರು. ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಮಾತನಾಡುತ್ತಾ,…
