ಶ್ರೀನಿವಾಸಮೂರ್ತಿ ಅವರ ವೃತ್ತಿಜೀವನದ ಸುವರ್ಣ ಸಂಭ್ರಮಕ್ಕೆ ‘ಶಿವ ಮೆಚ್ಚಿದ ಕಣ್ಣಪ್ಪ’ ನಾಟಕ ಪ್ರದರ್ಶನ; ತಾತನೊಂದಿಗೆ ಮೊಮ್ಮಕ್ಕಳ ರಂಗಪ್ರವೇಶ ವಿಶೇಷ
ನವೆಂಬರ್ 8ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪೌರಾಣಿಕ ನಾಟಕ ಪ್ರದರ್ಶನ ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಿವಾಸಮೂರ್ತಿ ಅವರು ಕಲಾರಂಗದಲ್ಲಿ ಐದು ದಶಕಗಳ ಸಾರ್ಥಕ ಪಯಣವನ್ನು ಪೂರೈಸಿರುವ ಸಂಭ್ರಮದ ಅಂಗವಾಗಿ, ಜೆ.ಕೆ.ಎಸ್. ಮಿತ್ರ ಮಂಡಳಿ ವತಿಯಿಂದ ಇದೇ ನವೆಂಬರ್ 8ರಂದು ಭಾನುವಾರ ಸಂಜೆ 5.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಶಿವ ಮೆಚ್ಚಿದ ಕಣ್ಣಪ್ಪ’ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕದಲ್ಲಿ ಹಿರಿಯ ನಟ ಶ್ರೀನಿವಾಸಮೂರ್ತಿ ಅವರು ಬೇಡರ ಕಣ್ಣಪ್ಪನಾಗಿ ಅಭಿನಯಿಸಿದರೆ, ಹಿರಿಯ ನಟ ರಮೇಶ್ ಭಟ್ ಅವರು ಮಾಯಾ…
