ಕ್ಲಾಸ್ ರೂಂನಲ್ಲಿ `ಗೌರಿ’ ಚಿತ್ರದ ಮ್ಯೂಸಿಕಲ್ ಟೀಸರ್ ಬಿಡುಗಡೆ ! ಸ್ಟಾರ್ ಕ್ರಿಕೆಟರ್; ಹೆಮ್ಮೆಯ ಕನ್ನಡತಿ ಶ್ರೇಯಾಂಕ ಪಾಟೀಲ್‍ರಿಂದ ಟೀಸರ್ ಬಿಡುಗಡೆ.

ಕ್ಲಾಸ್ ರೂಂನಲ್ಲಿ `ಗೌರಿ’ ಚಿತ್ರದ ಮ್ಯೂಸಿಕಲ್ ಟೀಸರ್ ಬಿಡುಗಡೆ ! ಸ್ಟಾರ್ ಕ್ರಿಕೆಟರ್; ಹೆಮ್ಮೆಯ ಕನ್ನಡತಿ ಶ್ರೇಯಾಂಕ ಪಾಟೀಲ್‍ರಿಂದ ಟೀಸರ್ ಬಿಡುಗಡೆ.

ಸಾಂಸ್ಕೃತಿಕ ನಗರಿ ಮೈಸೂರಿನ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಭ್ರಮವೋ ಸಂಭ್ರಮ. ಅಲ್ಲಿ ನೆರೆದಿದ್ದ ಜನರಲ್ಲಿ ಕುತೂಹಲ ಮನೆ ಮಾಡಿತ್ತು. ಇದೇ ಮೊದಲ ಬಾರಿಗೆ ಗೌರಿ’ ಚಿತ್ರ ತಂಡ ಕಾಲೇಜಿನ ಕ್ಲಾಸ್ ರೂಂನಲ್ಲಿ ಚಿತ್ರದ ಮ್ಯೂಸಿಕಲ್ ಟೀಸರ್ ರಿಲೀಸ್ ಮಾಡಿದ್ದು ವಿಶೇಷವಾಗಿತ್ತು. ಭಾರತದ ಸ್ಟಾರ್ ಕ್ರಿಕೆಟರ್; ಆರ್‍ಸಿಬಿಯ ಆಲ್‍ರೌಂಡರ್; ಕರ್ನಾಟಕದ ಹೆಮ್ಮೆಯ ಆಟಗಾರ್ತಿ ಶ್ರೇಯಾಂಕ ಪಾಟೀಲ್ಐ ಲವ್ ಯೂ ಸಮಂತ’ ಮ್ಯೂಸಿಕಲ್ ಟೀಸರನ್ನು ಬಿಡುಗಡೆಗೊಳಿಸಿದರು. ತೆರೆ ಮೇಲೆ ಟೀಸರ್ ಮೂಡುತ್ತಿದ್ದಂತೆ ನೆರೆದಿದ್ದ ನೂರಾರು ವಿದ್ಯಾರ್ಥಿಗಳು ಕುಣ ದು ಕುಪ್ಪಳಿಸಿದರು….