ನಟಿ ಶರ್ಮಿಳಾ ಮಾಂಡ್ರೆ ಸಾರಥ್ಯದಲ್ಲಿ ನಿರ್ಮಾಣವಾಗಿದೆ “ಸಿಲ ನೋಡಿಗಳಿಲ್” ತಮಿಳು ಚಿತ್ರ .” ಮುಂದಿನ ನಿಲ್ದಾಣ” ಚಿತ್ರದ ನಿರ್ದೇಶಕ ವಿನಯ್ ಭಾರದ್ವಾಜ್ ನಿರ್ದೇಶನದ ಈ ಚಿತ್ರ ನವೆಂಬರ್ 24 ರಂದು ಬಿಡುಗಡೆ .
“ಸಜನಿ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ, “ಗಾಳಿಪಟ” ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ನಟಿ ಶರ್ಮಿಳಾ ಮಾಂಡ್ರೆ ಈಗ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿದ್ದಾರೆ. ಮಲೇಷಿಯಾ ಮೂಲದ ಪುನ್ನಗೈ ಪೂ ಗೀತಾ ನಿರ್ಮಾಣದ ಈ ಚಿತ್ರದ ಸಂಪೂರ್ಣ ಜವಾಬ್ದಾರಿ ಶರ್ಮಿಳಾ ಮಾಂಡ್ರೆ ಹೊತ್ತಿಕೊಂಡಿದ್ದಾರೆ. ಈ ಹಿಂದೆ “ಮುಂದಿನ ನಿಲ್ದಾಣ” ಎಂಬ ಯಶಸ್ವಿ ಚಿತ್ರವನ್ನು ನಿರ್ದೇಶಿಸಿದ್ದ ವಿನಯ್ ಭಾರದ್ವಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನಾನು ನಿರ್ದೇಶಿಸಿದ್ದ “ಮುಂದಿನ ನಿಲ್ದಾಣ” ಚಿತ್ರ ತೆರೆಕಂಡು ಎಲ್ಲರ ಮೆಚ್ಚುಗೆ…