“X&Y” ಚಿತ್ರದ “ಆoಬು ಆಟೋ ” ಎಂಬ ಆಪ್ತಮಿತ್ರ.
ಇನ್ನೇನು ಬಿಡುಗಡೆಯ ಅoಚಿಗೆ ಬoದಿರುವ ಕನ್ನಡದ “X&Y” ಚಿತ್ರದಲ್ಲಿ ಆಟೋರಿಕ್ಷಾ “ಆಂಬು ಆಟೋ ” ಆಗಿ ಬಡ್ತಿ ಪಡೆದು ಎಲ್ಲರ ಗಮನ ಸೆಳೆದಿದೆ. ಆಂಬುಲೆನ್ಸ್ ನಲ್ಲಿರುವoತೆ ಎಲ್ಲ ಸೌಲಭ್ಯಗಳನ್ನು ಈ ಆಟೋದಲ್ಲಿ ಅಳವಡಿಸಿ ಚಿತ್ರದಲ್ಲಿ ಅದನ್ನೊಂದು ಕಲಾವಿದನೆoಬಂತೆ ಕಲಾತ್ಮಕವಾಗಿ ಬಳಸಲಾಗಿದೆ. ಈ ವಿಷಯ ತಿಳಿದ ಆಟೋ ಚಾಲಕರು ಗುಂಪು-ಗುಂಪಾಗಿ, ಚಿತ್ರ ನಿರ್ದೇಶಕ ಸತ್ಯಪ್ರಕಾಶ್ ಅವರನ್ನು ಖುದ್ದು ಭೇಟಿ ಮಾಡಿ, ‘ಸರ್ ಇಲ್ಲಿತನಕ ‘ಆಟೋರಿಕ್ಷಾ’ ನಮ್ಮ ‘ಮಿತ್ರ’ನಾಗಿತ್ತು. ಈಗದನ್ನು ‘ಆಂಬು ಆಟೋ’ ಆಗಿ ಪರಿವರ್ತಿಸಿ ಎಲ್ಲರ ‘ಆಪ್ತಮಿತ್ರ’ನಾಗಿರುವಂತೆ ಮಾಡಿದ್ದೀರಿ…