ಗೌರಿ ಹಬ್ಬಕ್ಕೆ ಬಂತು “ಗೋಪಿಲೋಲ”ನ ಹಾಡು . “ಗೋಪಿಲೋಲ ಓ ಶೋಕಿವಾಲ” ಶೀರ್ಷಿಕೆ ಹಾಡು ಬಿಡುಗಡೆ ಮಾಡಿ ಹಾರೈಸಿದ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ .

ಗೌರಿ ಹಬ್ಬಕ್ಕೆ ಬಂತು “ಗೋಪಿಲೋಲ”ನ ಹಾಡು . “ಗೋಪಿಲೋಲ ಓ ಶೋಕಿವಾಲ” ಶೀರ್ಷಿಕೆ ಹಾಡು ಬಿಡುಗಡೆ ಮಾಡಿ ಹಾರೈಸಿದ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ .

ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್ ಆರ್ ಸನತ್ ಕುಮಾರ್ ನಿರ್ಮಿಸಿರುವ, ಮಂಜುನಾಥ್ ಅರಸು ಅವರ ಸಹ ನಿರ್ಮಾಣವಿರುವ ಹಾಗೂ ಆರ್ ರವೀಂದ್ರ ನಿರ್ದೇಶನದ “ಗೋಪಿಲೋಲ” ಚಿತ್ರದ “ಗೋಪಿಲೋಲ ಓ ಶೋಕಿವಾಲ” ಎಂಬ ಶೀರ್ಷಿಕೆ ಗೀತೆ ಗೌರಿ ಹಬ್ಬದ ಶುಭದಿನದಂದು ಬಿಡುಗಡೆಯಾಗಿದೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ಕೇಶವ ಚಂದ್ರ ಅವರು ಬರೆದಿರುವ ಈ ಹಾಡನ್ನು ಹೇಮಂತ್ ಕುಮಾರ್ ಹಾಗೂ ವಾರಿಜಶ್ರೀ ಹಾಡಿದ್ದಾರೆ. ಮಿಥುನ್ ಅಶೋಕನ್ ಚೆನ್ನೈ ಸಂಗೀತ ನೀಡಿದ್ದಾರೆ….