ಕೋಮಲ್ ಕುಮಾರ್ – ಸೋನಾಲ್ ಮೊಂತೆರೊ ಜೋಡಿಯ ಹಾಗೂ ವಿನೋದ್ ಪ್ರಭಾಕರ್ ವಿಶೇಷಪಾತ್ರದಲ್ಲಿ ನಟಿಸಿರುವ “ರೋಲೆಕ್ಸ್” ಚಿತ್ರದ ಟೀಸರ್ ಬಿಡುಗಡೆ
ನಟ ಕೋಮಲ್ ಕುಮಾರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ “ರೋಲೆಕ್ಸ್” ಚಿತ್ರದ ಟೀಸರ್ ಬಿಡುಗಡೆಯಾಗಿದೆ ಕೋಮಲ್ ಗೆ ನಾಯಕಿಯಾಗಿ ಸೋನಲ್ ಮಾಂತೆರೊ ಕಾಣಿಸಿಕೊಂಡಿದ್ದಾರೆ. ವಿಶೇಷಪಾತ್ರದಲ್ಲಿ ವಿನೋದ್ ಪ್ರಭಾಕರ್ ಕಾಣಿಸಿಕೊಂಡಿದ್ದಾರೆ. ಹಿರಿಯ ಕಲಾವಿದರಾದ ಅಚ್ಯುತ್ ಕುಮಾರ್, ಅರುಣಾ ಬಾಲರಾಜ್, ನವೀನ್ ಪಡೀಲ್, ರಾಣಾ ಸೇರಿದಂತೆ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ನಿರ್ಮಾಪಕ ಅಂಬಟಿ ಮಧು ಮೋಹನ್ ಕೃಷ್ಣ ಅವರೆ ಟೀಸರ್ ಬಿಡುಗಡೆ ಮಾಡಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು….
