ರಾಕ್ಲೈನ್ ವೆಂಕಟೇಶ್ ಮೊಮ್ಮಗ ಶಿವತೇಜ ವೈ ಅವರಿಂದ ರೂಬಿಕ್ಸ್ ಕ್ಯೂಬ್ನಲ್ಲಿ ವಿಶ್ವ ದಾಖಲೆ – ಕುಟುಂಬಕ್ಕೆ ಹೆಮ್ಮೆಯ ಕಿರೀಟ
ಬೆಂಗಳೂರು: ಚಿತ್ರರಂಗದಲ್ಲಿ ದಶಕಗಳ ಕಾಲ ಸಕ್ರಿಯರಾಗಿರುವ ಖ್ಯಾತ ನಿರ್ಮಾಪಕ ಶ್ರೀ ರಾಕ್ಲೈನ್ ವೆಂಕಟೇಶ್ ಅವರ ಕುಟುಂಬಕ್ಕೆ ಈಗ ಮತ್ತೊಂದು ಹೆಮ್ಮೆಯ ಗರಿ ಲಭಿಸಿದೆ. ಅವರ 14 ವರ್ಷದ ಮೊಮ್ಮಗ ಶಿವತೇಜ ವೈ ಅವರು ಮಿಶ್ರಣಗೊಂಡ ‘ಮೆಗಾಮಿಂಕ್ಸ್ ರೂಬಿಕ್ಸ್ ಕ್ಯೂಬ್’ ಬಿಡಿಸುವಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆಯುವ ಮೂಲಕ ತ್ರಿವಳಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಅಪರೂಪದ ಸಾಧನೆಯನ್ನು ಸಂಭ್ರಮಿಸಲು ಭಾನುವಾರ…
