ಆರ್. ಚಂದ್ರು 45ನೇ ಹುಟ್ಟುಹಬ್ಬಕ್ಕೆ ಡಾಕ್ಟರೇಟ್ ಗೌರವಮಣಿಪುರ ಅಂತರಾಷ್ಟ್ರೀಯ ವಿಶ್ವವಿದ್ಯಾಲಯದಿಂದ ಘೋಷಣೆ
ನಿರ್ದೇಶಕ, ನಿರ್ಮಾಪಕನಾಗಿ ಹೆಸರು ಮಾಡಿರುವ ಆರ್. ಚಂದ್ರು ಸದ್ಯ 45ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೇಶವಾರ ಎಂಬ ಹಳ್ಳಿಯಲ್ಲಿ ರೈತ ಕುಟುಂಬದಲ್ಲಿ ಜನಿಸಿದ ಚಂದ್ರು 20 ವರ್ಷಗಳ ಹಿಂದೆ 100 ರೂ ಇಟ್ಟುಕೊಂಡು ಬೆಂಗಳೂರಿಗೆ ಬಂದವರು. ರೈಟರ್ ಆಗಿ ಚಿತ್ರರಂಗದಲ್ಲಿ ವೃತ್ತಿ ಪ್ರಾರಂಭ ಮಾಡಿದ ಚಂದ್ರು ನಿರ್ದೇಶನಾಗಿ, ನಿರ್ಮಾಪಕನಾಗಿ ಮೈಲುಗಲ್ಲು ಸೃಷ್ಟಿಸಿದ್ದಾರೆ. ಬರಿ ಸಿನಿಮಾ ಮಾತ್ರವಲ್ಲದೆ ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹೌದು ಚಿಕ್ಕಬಳ್ಳಾಪುರ ಜಿಲ್ಲೆಯ ಹಳ್ಳಿ ಹಳ್ಳಿಗೂ ಚಂದ್ರು ಪರಿಚಯ….
