ಟೀಸರ್ ನಲ್ಲೇ ಕುತೂಹಲ ಮೂಡಿಸಿದೆ ನಿತಿನ್ ಭಾರದ್ವಾಜ್ ನಿರ್ದೇಶನದ “ರಂಗಸ್ಥಳ” .
ಅಘೋರ್ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಡಾ||ರೇವಣ್ಣ ಹಾಗೂ ಮೋಹನ್ ಕುಮಾರ ಎಮ್ ಎಲ್ ನಿರ್ಮಿಸುತ್ತಿರುವ, ನಿತಿನ್ ಭಾರದ್ವಾಜ್ ನಿರ್ದೇಶನದ ಹಾಗೂ “ಗಿರ್ಕಿ” ಖ್ಯಾತಿಯ ವಿಲೋಕ್ ರಾಜ್ ನಾಯಕನಾಗಿ ನಟಿಸುತ್ತಿರುವ “ರಂಗ ಸ್ಥಳ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಆಕ್ಷನ್ ಡ್ರಾಮ ಕಥಾಹಂದರ ಹೊಂದಿರುವ ಈ ಚಿತ್ರದ ಟೀಸರ್ ಸಾಕಷ್ಟು ಕುತೂಹಲ ಮೂಡಿಸಿದೆ. ಟೀಸರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುವುದರ ಜೊತೆಗೆ ಎಲ್ಲರ ಮೆಚ್ಚುಗೆಗೂ ಪಾತ್ರವಾಗುತ್ತಿದೆ. ಸದ್ಯ, ಚಿತ್ರೀಕರಣ ಮುಗಿಸಿರುವ ಈ ಚಿತ್ರಕ್ಕೆ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. “ರಂಗಸ್ಥಳ” ಆಕ್ಷನ್…
