ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕ ರಮೇಶ್ ರೆಡ್ಡಿ ಅವರಿಂದ ಮತ್ತೊಂದು ಹೊಸ ಪ್ರಯತ್ನ; 2027ರ ಜನವರಿಯಲ್ಲಿ ಸೂರಜ್ ಪ್ರೊಡಕ್ಷನ್ಸ್ನ ‘ಪ್ರೊಡಕ್ಷನ್ ನಂಬರ್ 9’ ಆರಂಭ!*
ದೀಪಾವಳಿ ಸಂಭ್ರಮಕ್ಕೆ ರಮೇಶ್ ರೆಡ್ಡಿ ಅವರ ಹುಟ್ಟುಹಬ್ಬದ ವಿಶೇಷ ಉಡುಗೊರೆ; ಹೊಸ ವರ್ಷದ ಆರಂಭದಲ್ಲೇ ಹೊಸ ಚಿತ್ರದ ಮುಹೂರ್ತ ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ಕನ್ನಡ ಚಿತ್ರರಂಗಕ್ಕೆ ಸೂರಜ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಸದಭಿರುಚಿಯ ಹಾಗೂ ವಿಭಿನ್ನ ಕಥಾಹಂದರದ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕ ರಮೇಶ್ ರೆಡ್ಡಿ ಅವರು ಮತ್ತೊಂದು ಹೊಸ ಚಿತ್ರ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ. ಸೂರಜ್ ಪ್ರೊಡಕ್ಷನ್ಸ್ನ ನೂತನ ಚಿತ್ರ ‘ಪ್ರೊಡಕ್ಷನ್ ನಂಬರ್…
