ನಮೀತ್ ಮಲ್ಹೋತ್ರಾ ನಿರ್ಮಾಣದ ಬಹುನಿರೀಕ್ಷಿತ “ರಾಮಾಯಣ” ಚಿತ್ರದ ಫಸ್ಟ್ ಲುಕ್ ರಿಲೀಸ್ ಮರ್ಯಾದಾ ಪುರುಷೋತ್ತಮ “ರಾಮ”ನ ಅವತಾರದಲ್ಲಿ ರಣಬೀರ್ ಕಪೂರ್
ನಮಿತ್ ಮಲ್ಹೋತ್ರಾ ನಿರ್ಮಾಣದ, ನಿತೇಶ್ ತಿವಾರಿ ನಿರ್ದೇಶನದ ಎರಡು ಭಾಗಗಳ ಸಿನಿಮೀಯ ಸರಣಿ ‘ರಾಮಾಯಣ’ ತನ್ನ ಮಹತ್ವದ ಅಧ್ಯಾಯವನ್ನು ತೆರೆದಿದೆ. ಈ ಮಹಾಕಾವ್ಯದ ಫಸ್ಟ್ ಲುಕ್ನಲ್ಲಿ ರಣಬೀರ್ ಕಪೂರ್ ಅವರು ‘ರಾಮ’ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಜಾಗತಿಕವಾಗಿ ಗಮನ ಸೆಳೆದಿದ್ದಾರೆ. ಈ ಚಿತ್ರವನ್ನು ಪ್ರೈಮ್ ಫೋಕಸ್ ಸ್ಟುಡಿಯೋಸ್, ಎಂಟು ಬಾರಿ ಅಕಾಡೆಮಿ ಪ್ರಶಸ್ತಿ ವಿಜೇತ ಡಿಎನ್ಇಜಿ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ.ವಿಶ್ವದಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾದ ‘ರಾಮಾಯಣ’ ಚಿತ್ರದ ಮೊದಲ ಟೀಸರ್, 5,000…
