ಶ್ರೀ ಕಾಕಾ ನಿರ್ದೇಶನ ಹಾಗೂ ನಟನೆಯ “ಅನಂತ ಪಯಣ” ಚಿತ್ರದ ಚಿತ್ರೀಕರಣ ಪೂರ್ಣ
ಕನ್ನಡದಲ್ಲಿ ಈಗ ಕಂಟೆಂಟ್ ಓರಿಯಂಟೆಡ್ ಚಿತ್ರಗಳೆ ಹೆಚ್ಚಾಗಿ ಬರುತ್ತಿದೆ. ಹೊಸತಂಡದ ಹೊಸಪ್ರಯತ್ನವನ್ನು ಜನರು ಮೆಚ್ಚಿಕೊಳ್ಳುತ್ತಿದ್ದಾರೆ. ಅಂತಹುದೇ ಹೊಸತಂಡದ ಹೊಸ ಪ್ರಯತ್ನ “ಅನಂತ ಪಯಣ”. ನೃತ್ಯ ಕಲಾವಿದನಾಗಿ, ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿ ಅನುಭವವಿರುವ ಶ್ರೀ ಕಾಕಾ,” ಅನಂತ ಪಯಣ”ದ ಮೂಲಕ ನಾಯಕನಾಗಿ ಹಾಗೂ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಎಸ್ ಕೆ ಫಿಲಂಸ್ ಫ್ಯಾಕ್ಟರಿ ಲಾಂಛನದಲ್ಲಿ ಸಂತೋಷ್ ಅಶೋಕ್ ಹೆಗಡೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ “ಅನಂತ ಪಯಣ”, ಇದು ಸಂಚಾರಿ ಕುರುಬರ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ….
