ವಸಿಷ್ಠ ಸಿಂಹ ಹುಟ್ಟುಹಬ್ಬಕ್ಕೆ ಕಲಾ ಸೃಷ್ಠಿ ಪ್ರೊಡಕ್ಷನ್ಸ್ ನಿಂದ ಹೊಸ ಸಿನಿಮಾ ಘೋಷಣೆ . ಬ್ರಹ್ಮ ನಿರ್ದೇಶನದಲ್ಲಿ ಮೂಡಿಬರಲಿದೆ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ
ತಮ್ಮ ಅಮೋಘ ಅಭಿನಯ ಹಾಗೂ ಕಂಠದ ಮೂಲಕ ಕನ್ನಡಿಗರ ಮನ ಗೆದ್ದಿರುವ ವಸಿಷ್ಠ ಸಿಂಹ ಅವರಿಗೆ ಈಗ(ಅಕ್ಟೋಬರ್ 19) ಹುಟ್ಟುಹಬ್ಬದ ಸಂಭ್ರಮ. ವಸಿಷ್ಠ ಸಿಂಹ ಹುಟ್ಟುಹಬ್ಬದ ಸಲುವಾಗಿ ಕಲಾ ಸೃಷ್ಠಿ ಪ್ರೊಡಕ್ಷನ್ಸ್ ನಿಂದ ಹೊಸ ಚಿತ್ರದ ಘೋಷಣೆಯಾಗಿದೆ ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ಅಫ್ಜಲ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ “ಸಿದ್ದಿ ಸೀರೆ” ಹಾಗೂ ರಾಗಿಣಿ ಅಭಿನಯದ “ಸಾರಿ” ಕರ್ಮ ರಿಟರ್ನ್ಸ್ ಚಿತ್ರದ ನಿರ್ದೇಶಕ ಬ್ರಹ್ಮ ಈ ನೂತನ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಕ್ರೈಮ್…