ಇದು ಚಂದ್ರು ಸಿನಿಮಾ ಶಿಖರ ! ಆರ್ ಸಿ ಸ್ಟುಡಿಯೋ – ಕನ್ನಡದ ಭರವಸೆಯ ನಿರ್ಮಾಣ ಸಂಸ್ಥೆ. ಆರು ಪ್ಯಾನ್ ಇಂಡಿಯಾ ಸಿನ್ಮಾ- ಬಿಗ್ ಸ್ಟಾರ್ಸ್ ಬಿಗ್ ಚಿತ್ರ. ಫಾದರ್ ಸಿನಿಮಾಗೆ ಏಪ್ರಿಲ್ 27 ಅದ್ಧೂರಿ ಮುಹೂರ್ತ
ಆರ್.ಚಂದ್ರು. ಸೌತ್ ಇಂಡಿಯಾ ಚಿತ್ರರಂಗಕ್ಕೆ ಚಿರಪರಿಚಿತವಾಗಿದ್ದ ಹೆಸರಿದು. ಸಿನಿಮಾ ಪ್ರೀತಿ, ಶ್ರದ್ಧೆ ಮತ್ತು ಶ್ರಮ ಈ ಮೂರು ಆರ್. ಚಂದ್ರು ಅವರ ಗೆಲುವಿನ ಮೂಲಮಂತ್ರ. ಈಗ ಆರ್.ಚಂದ್ರು ಅಂದರೆ ಭಾರತೀಯ ಚಿತ್ರರಂಗಕ್ಕೂ ಗೊತ್ತು. ಅಷ್ಟು ಎತ್ತರಕ್ಕೆ ಬೆಳೆದು ನಿಂತ ಅಪ್ಪಟ ಸಿನಿಮಾ ಪ್ರೇಮಿ. ಹೌದು, ಆರ್.ಚಂದ್ರುಸಾಮಾನ್ಯ ರೈತರೊಬ್ಬರ ಮಗ. ಕಲರ್ ಫುಲ್ ಜಗತ್ತಿನಲ್ಲಿ ಈ ಮಟ್ಟಕ್ಕೆ ಬೆಳೆದಿದ್ದು ನಿಜಕ್ಕೂ ಹೆಗ್ಗಳಿಕೆ. ಒಬ್ಬ ನಿರ್ದೇಶಕನಾಗಿ ಯಶಸ್ವಿಯಾಗೋದು ಈ ಕಾಲಘಟ್ಟದಲ್ಲಿ ನಿಜಕ್ಕೂ ಕಷ್ಟ. ಸಿನಿಮಾ ಪ್ರೇಕ್ಷಕರಿಗೆ ರುಚಿಸುವ, ಕಾಡುವ, ಅಳಿಸುವ,…