“ಕರ್ಣಾಟಬಲಂ ಅಜೇಯಂ” ಚಿತ್ರಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಡಿ.ಕೆ.ಶಿವಕುಮಾರ್ ಅವರಿಂದ ಹಾಗೂ “ಸೈನಿಕ 2” ಚಿತ್ರಕ್ಕೆ ಕೇಂದ್ರ ಸಚಿವ ಶ್ರೀವಿ.ಸೋಮಣ್ಣ ಅವರಿಂದ ಅದ್ದೂರಿ ಚಾಲನೆ
ಪಿ.ಎಂ.ಜಿ ಫಿಲಂ ಫ್ಯಾಕ್ಟರಿ ನಿರ್ಮಾಣದ ಈ ಚಿತ್ರಗಳ ಮೂಲಕ ಶಾಸಕ ಸಿ.ಪಿ.ಯೋಗೀಶ್ವರ್ ಪುತ್ರ ಧ್ಯಾನ್ ಯೋಗೀಶ್ವರ್ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ. ಈ ಎರಡು ಚಿತ್ರಗಳಲ್ಲೂ 25 ವರ್ಷಗಳ ನಂತರ ಸಿ.ಪಿ.ಯೋಗೀಶ್ವರ್ ನಟನೆ . 40 ವರ್ಷಗಳಿಂದ ಕನ್ನಡ ಚಿತ್ರರಂಗದೊಂದಿಗೆ ನಂಟಿರುವ ಹಾಗೂ 25 ವರ್ಷಗಳ ಹಿಂದೆ “ಸೈನಿಕ” ಎಂಬ ಜನಪ್ರಿಯ ಚಿತ್ರದ ಮೂಲಕ ಎಲ್ಲರ ಮನೆಮಾತಾಗಿರುವ ಸಿ.ಪಿ.ಯೋಗೀಶ್ವರ್ ಅವರ ಪುತ್ರ ಧ್ಯಾನ್ ಯೋಗೀಶ್ವರ್ “ಕರ್ಣಾಟಬಲಂ ಅಜೇಯಂ” ಹಾಗೂ “ಸೈನಿಕ ೨” ಚಿತ್ರಗಳಲ್ಲಿ ನಾಯಕನಾಗಿ ನಟಿಸುವ ಮೂಲಕ…
