‘ಯೂಟ್ಯೂಬ್’ನಲ್ಲಿ ಟ್ರೆಂಡಾಯ್ತು, ಉತ್ತರ ಕರ್ನಾಟಕದ ‘ನೈಂಟಿ’!

‘ಯೂಟ್ಯೂಬ್’ನಲ್ಲಿ ಟ್ರೆಂಡಾಯ್ತು, ಉತ್ತರ ಕರ್ನಾಟಕದ ‘ನೈಂಟಿ’!

ಕಳೆದ ವರ್ಷದ ಜೂನ್ ತಿಂಗಳಲ್ಲಿ ತೆರೆಕಂಡು ಸದ್ದು ಮಾಡಿದ್ದ ‘ನೈಂಟಿ ಬಿಡಿ ಮನೀಗ್ ನಡಿ’ ಚಿತ್ರ ಈಗ ಮತ್ತೆ ಸದ್ದು ಮಾಡತೊಡಗಿದೆ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಯಶಸ್ವಿ ಪ್ರದರ್ಶನ ಕಂಡು, ಭರ್ಜರಿ ಹವಾ ಮಾಡಿಕೊಂಡಿದ್ದ ಈ ಚಿತ್ರವು, ಸದ್ಯ Panorama Cinetimes ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಿ, ಟ್ರೆಂಡಿಂಗ್ ನಲ್ಲಿದೆ. ದಿನದಿಂದ ದಿನಕ್ಕೆ ವೀವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಾ, “ಆರ್ಗಾನಿಕ್ ಲಕ್ಷ ವೀವ್ಸ್” (100K) ದಾಟಿಸಿಕೊಂಡು ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ‘ಅಮ್ಮಾ ಟಾಕೀಸ್ ಬಾಗಲಕೋಟ’ ಬ್ಯಾನರಿನಡಿ, ರತ್ನಮಾಲಾ ಬಾದರದಿನ್ನಿ ನಿರ್ಮಿಸಿದ್ದ…