‘ಒರಿಜಿನಲ್ ಮಾನ್‌ಸ್ಟರ್’(OM) ಚಿತ್ರತಂಡ ಸೇರಿದ ನಟ ಶ್ರೀರಾಜನ್
ಆರ್. ಚಂದ್ರು ನಿರ್ದೇಶನದ, ಶಿವರಾಜಕುಮಾರ್ ನಾಯಕನಾಗಿ ನಟಿಸುತ್ತಿರುವ ಚಿತ್ರದಲ್ಲಿ ಶ್ರೀರಾಜನ್ ಭಾಗಿ ‘ಕಬ್ಜ’ ಚಿತ್ರದ ನಂತರ ಆರ್. ಚಂದ್ರು ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ‘ಒರಿಜಿನಲ್ ಮಾನ್‌ಸ್ಟರ್’ (OM) ಚಿತ್ರತಂಡಕ್ಕೆ ನಟ ಶ್ರೀರಾಜನ್ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಚಿತ್ರದ ಎರಡನೇ ಹಂತದ ಚಿತ್ರೀಕರಣದಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಆನಂದ್ ಪಂಡಿತ್ ಅರ್ಪಿಸುವ ಈ ಚಿತ್ರವನ್ನು ಆರ್.ಸಿ. ಸ್ಟುಡಿಯೋಸ್ ಲಾಂಛನದಲ್ಲಿ ಯಮುನಾ ಚಂದ್ರು ನಿರ್ಮಿಸುತ್ತಿದ್ದಾರೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿದ್ದು,…
