ಅಕ್ಷಯ ತೃತೀಯದಂದು ಆರಂಭವಾಯಿತು “ಶಿವಶರಣ ಮೋಳಿಗೆ ಮಾರಯ್ಯ” ಚಿತ್ರ . ಭಕ್ತಿಪ್ರಧಾನ ಈ ಚಿತ್ರಕ್ಕೆ ಕೊಪ್ಪಳದ ಗವಿಮಠದ ಶ್ರೀಗಳಿಂದ ಚಾಲನೆ .
ಹೆಸರಾಂತ ಶಿವಶರಣ ಮೋಳಿಗೆ ಮಾರಯ್ಯ ಚಿತ್ರ ಅಕ್ಷಯ ತೃತೀಯ ಹಾಗೂ ಬಸವ ಜಯಂತಿ ಶುಭದಿನದಂದು ಕೊಪ್ಪಳದ ಶ್ರೀಗವಿ ಸಿದ್ದೇಶ್ವರ ಮಠದಲ್ಲಿ ಆರಂಭವಾಗಿದೆ. ಪೂಜ್ಯ ಗವಿ ಸಿದ್ದೇಶ್ವರ ಮಠದ ಶ್ರೀಗಳು ಚಿತ್ರಕ್ಕೆ ಚಾಲನೆ ನೀಡಿದ್ದಾರೆ. “ಶ್ರೀ ಜಗನ್ನಾಥದಾಸರು”, ” ಶ್ರೀಪ್ರಸನ್ನವೆಂಕಟದಾಸರು” ಹಾಗೂ ಇತ್ತೀಚಿಗೆ ತೆರೆಕಂಡ “ದಾಸವರೇಣ್ಯ ಶ್ರೀ ವಿಜಯದಾಸರು” ಸೇರಿದಂತೆ ನಾಡಿನ ಹೆಸರಾಂತ ಹರಿದಾಸರ ಚಿತ್ರಗಳ ನಿರ್ದೇಶಕ ಮಧುಸೂದನ್ ಹವಾಲ್ದಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮಾತಾಂಬುಜ ಮೂವೀಸ್ ಅರ್ಪಿಸುವ ಹಾಗೂ ಹವಾಲ್ದಾರ್ ಫಿಲಂಸ್ ನ ಮೂಲಕ ಮಧುಸೂದನ್ ಹವಾಲ್ದಾರ್…