ಕಾರ್ತಿಕ್ ಮಹೇಶ್ ಹುಟ್ಟುಹಬ್ಬಕ್ಕೆ ಕ್ಯಾರೆಕ್ಟರ್ ಪಂಚ್ ಬಿಡುಗಡೆ ಮಾಡಿದ “ರಾಮರಸ” ತಂಡ. .
ಗುರುದೇಶಪಾಂಡೆ ಅವರು ನಿರ್ಮಿಸುತ್ತಿರುವ, ‘ಜಟ್ಟ’ ಗಿರಿರಾಜ್ ನಿರ್ದೇಶನದ ‘ರಾಮರಸ’ ಚಿತ್ರದಲ್ಲಿ ಕಳೆದ ಬಾರಿಯ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಅವರು ನಾಯಕನಾಗಿ ನಟಿಸುತ್ತಿದ್ದಾರೆ. ಅಕ್ಟೋಬರ್ 7, ನಾಯಕ ಕಾರ್ತಿಕ್ ಮಹೇಶ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ “ರಾಮರಸ” ಚಿತ್ರತಂಡ ಕ್ಯಾರೆಕ್ಟರ್ ಪಂಚ್ ಬಿಡುಗಡೆ ಮಾಡುವ ಮೂಲಕ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಕಾರ್ತಿಕ್ ಮಹೇಶ್ ಅವರ ಜೊತೆಗೆ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದ ಸಹ ಸ್ಪರ್ಧಿಗಳು “ರಾಮರಸ” ಚಿತ್ರದ ಕ್ಯಾರೆಕ್ಟರ್ ಪಂಚ್ ಬಿಡುಗಡೆ ಮಾಡಿ, ನೆಚ್ಚಿನ…