ಸಮಾಜಕ್ಕೆ ಉತ್ತಮ “ಉದಾಹರಣೆ” ಆಗಲಿದೆ ನಮ್ಮ ಚಿತ್ರ ನಿರ್ದೇಶಕ ದಿನೇಶಾಚಾರ್ .
ಕಳೆದ ಕೆಲವು ವರ್ಷಗಳಿಂದ ಪ್ರಸಾದನ ಕಲಾವಿದರಾಗಿ ಗುರುತಿಸಿಕೊಂಡಿರುವ ದಿನೇಶಾಚಾರ್ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವವರು. ಪ್ರಸ್ತುತ ಅವರು “ಉದಾಹರಣೆ” ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಭೂಮಿಕ ಮೂವೀಸ್ ಲಾಂಛನದಲ್ಲಿ ಹೇಮಾವತಿ ದಿನೇಶಾಚಾರ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಅಕ್ಟೋಬರ್ 18 ರಂದು ತೆರೆಗೆ ಬರಲಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ನಾನು ವಸ್ತ್ರಾಲಂಕಾರ ಕಲಾವಿದನಾಗಿ, ಪ್ರಸಾದನ ಕಲಾವಿದನಾಗಿ ಹಾಗು ಸಹ ನಿರ್ದೇಶಕನಾಗಿ ಹಲವು ಚಿತ್ರಗಳಿಗೆ ಕೆಲಸ…