ಟ್ರೇಲರ್ ಹಾಗೂ ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿರುವ ಬಹು ನಿರೀಕ್ಷಿತ “ನಾಗಬಂಧಂ” ಚಿತ್ರ ಜುಲೈ 03ರಂದು ಬಿಡುಗಡೆ
ಅಭಿಷೇಕ್ ನಾಮ ನಿರ್ದೇಶನದ ಈ ಚಿತ್ರಕ್ಕೆ ವಿರಾಟ್ ಕರ್ಣ ನಾಯಕ – ಕನ್ನಡದ ಹುಡುಗಿ ನಭಾ ನಟೇಶ್ ನಾಯಕಿ . ಅಭಿಷೇಕ್ ನಾಮ ನಿರ್ದೇಶನದ ಅತ್ಯಂತ ಮಹತ್ವಾಕಾಂಕ್ಷೆಯ ಪ್ಯಾನ್ ಇಂಡಿಯಾ ಚಿತ್ರವಾದ ‘ನಾಗಬಂಧಂ’, ಜುಲೈ 03ರಂದು ಜಗತ್ತಿನಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೂ ಮೊದಲು ಚಿತ್ರದ ಪ್ರಚಾರದ ಕೆಲಸಗಳು ಶುರುವಾಗಿದ್ದು, ಚಿತ್ರತಂಡ ಬೆಂಗಳೂರಿನಲ್ಲಿ ಇತ್ತೀಚೆಗೆ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ನಾಯಕ ವಿರಾಟ್ ಕರ್ಣ, ನಾಯಕಿ ನಭಾ ನಟೇಶ್, ಕಲಾವಿದರಾದ ಗರುಡ ರಾಮ್, ಭಜರಂಗಿ ಪ್ರಸನ್ನ, ವಿನಯ್ ಬಿದ್ದಪ್ಪ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ…
